ಗೋಕರ್ಣದ ತಲಗೇರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮಳೆ ನೀರು ಕುಡಿದು ದಾಹ ತಣಿಸಿಕೊಳ್ಳುತ್ತಿದ್ದಾರೆ. ಮಕ್ಕಳ ಅಡುಗೆಗೆ ಸಹ ಹಂಚಿನಿoದ ತೊಟ್ಟಿಕ್ಕುವ ನೀರನ್ನು ಹಿಡಿದು ಬಳಸಲಾಗುತ್ತಿದೆ.
ಗ್ರಾಮ ಪಂಚಾಯತದಿoದ ಈ ಶಾಲೆಗೆ ಜಲಜೀವನ್ ಮಿಷಯ್ ಯೋಜನೆ ಅಡಿ ನೀರಿನ ಸಂಪರ್ಕ ನೀಡಲಾಗಿದೆ. ಆದರೆ, ಶಾಲೆ ಶುರುವಾಗಿ ತಿಂಗಳು ಕಳೆದರೂ ಒಂದು ಹನಿ ನೀರನ್ನು ಪೂರೈಸಿಲ್ಲ. ಹೀಗಾಗಿ ಪುಟ್ಟ ಮಕ್ಕಳು ನೇರವಾಗಿ ಮಳೆ ನೀರಿಗೆ ಮೊರೆ ಹೋಗಿದ್ದಾರೆ.
ಶಾಲೆಯ ಆವರಣದಲ್ಲಿ ಪಾತ್ರೆಯನ್ನು ಇರಿಸಲಾಗಿದ್ದು, ಅದರಲ್ಲಿ ಛಾವಣಿಯಿಂದ ಬೀಳುವ ಮಳೆ ನೀರು ಸಂಗ್ರಹವಾಗುತ್ತದೆ. ಕೈ ಮತ್ತು ಪಾತ್ರೆ ತೊಳೆಯುವುದರ ಜೊತೆ ಅಡುಗೆಗೆ ಸಹ ಇದೇ ನೀರು ಅನಿವಾರ್ಯವಾಗಿದೆ. ನೀರು ಪೂರೈಕೆಯ ಬಗ್ಗೆ ಗ್ರಾಮ ಪಂಚಾಯತದವರನ್ನು ಪ್ರಶ್ನಿಸಿದರೆ `ಪೈಪ್ ಲೈನ್ ಹಾಳಾದರೆ ನಾವೇನು ಮಾಡಬೇಕು?’ ಎಂದು ಮರುಪ್ರಶ್ನೆ ಹಾಕುತ್ತಾರೆ.
ಮಕ್ಕಳಿಗೆ ನೀರು ಕುಡಿಸಿದ ಗ್ರಾ ಪಂ:
ಬುಧವಾರ ಸಂಜೆಯ ಹೊತ್ತಿಗೆ ಹಾಳಾಗಿದ್ದ ಪೈಪ್ ಸರಿಪಡಿಸಿ ಶಾಲೆಗೆ ನೀರು ಪೂರೈಕೆ ಮಾಡಲಾಗಿದೆ. ಗ್ರಾಮ ಪಂಚಾಯತ ಅಧಿಕಾರಿಗಳು ಆಗಮಿಸಿ, ನೀರು ಒದಗಿಸಿದರು
Discussion about this post