ಯಲ್ಲಾಪುರದ ಮಂಚಿಕೇರಿಯ ವಿಕಾಸ ನಾಯ್ಕ ಅವರು 5 ಸಾವಿರ ರೂ ಬಹುಮಾನ ಗೆದ್ದಿದ್ದಾರೆ. ಅವರು ನಟಿಸಿದ ಕಿರುಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದ್ದು, ಮುಖ್ಯ ಪಾತ್ರ ನಿಭಾಯಿಸದ ಕಾರಣ ಅವರಿಗೆ ಈ ಬಹುಮಾನ ದೊರೆತಿದೆ.
2024ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕೆಲ ಕಲಾವಿದರು `ಟಾನಿಕ್’ ಎಂಬ ಕಿರುಚಿತ್ರ ನಿರ್ಮಿಸಿದ್ದರು. ಅನಾರೋಗ್ಯಕ್ಕೆ ಒಳಗಾದ ಮಗುವಿನ ಔಷಧಿಗಾಗಿ ಮೀಸಲಿಟ್ಟ 500ರೂ ಹಣವನ್ನು ಮಗುವಿನ ತಂದೆ ವ್ಯಸನಕ್ಕೆ ಬಳಸಿದ್ದು, ಔಷಧಿಗೆ 10ರೂಪಾಯಿ ಕಡಿಮೆ ಬಿದ್ದು ಮಗುವನ್ನು ಕಳೆದುಕೊಂಡ ಕಥೆಯನ್ನು ಈ ಚಿತ್ರ ಒಳಗೊಂಡಿತ್ತು. ವ್ಯಸನದ ವಿರುದ್ಧ ಸಂದೇಶ ನೀಡುವ ಚಿತ್ರ ಇದಾಗಿದ್ದು, ಯೂಟೂಬ್ ಮೂಲಕ ಬಿಡುಗಡೆ ಮಾಡಲಾಗಿತ್ತು.
ಜನ ಜಾಗೃತಿ ಉದ್ದೇಶದ ಈ ಕಿರುಚಿತ್ರದಲ್ಲಿ ಮಂಚಿಕೇರಿಯ ವಿಕಾಸ ನಾಯ್ಕ ಅವರು ಮಗುವಿನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಕಿರುಚಿತ್ರವನ್ನು ಸಂಪತ್ ನಾರಾಯಣ ಅವರು ನಿರ್ದೇಶಿಸಿದ್ದರು. ಸಿದ್ದಾಪುರದ ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಶಿವಮೊಗ್ಗದಲ್ಲಿ ಅಂಬೆಗಾಲು ಸಂಸ್ಥೆ ನಡೆಸಿದ ಕಿರುಚಿತ್ರ ಸ್ಪರ್ಧೆಯಲ್ಲಿ `ಟಾನಿಕ್’ ಚಿತ್ರ ನಿರ್ಣಾಯಕರ ಗಮನ ಸೆಳೆದಿದ್ದು, ಅದರಲ್ಲಿ ಮುಖ್ಯಪಾತ್ರ ನಿಭಾಯಿಸಿದ ವಿಕಾಸ ನಾಯ್ಕ ಅವರ ನಟನೆಗೆ ಸಂಘಟನೆಯವರು ತಲೆಭಾಗಿದರು.
6 ನಿಮಿಷದ ಈ ಚಿತ್ರದಲ್ಲಿನ ಸಾಮಾಜಿಕ ಸಂದೇಶ ಗಮನಿಸಿ ನಿರ್ಣಾಯಕರು ವಿಕಾಸ ನಾಯ್ಕ ಅವರಿಗೆ ಬಹುಮಾನ ನೀಡಿದರು.ಸುಮಾರು 180 ಚಿತ್ರಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದವು. ಬಹುಮಾನ ಸಿಕ್ಕಿರುವುದಕ್ಕೆ ಚಿತ್ರ ತಂಡದವರು ಸಂತಸ ಹಂಚಿಕೊoಡರು.
ಟಾನಿಕ್ ಕಿರು ಚಿತ್ರ ಇಲ್ಲಿ ನೋಡಿ..