ರೈಲಿನಲ್ಲಿ ಸಿಕ್ಕ ಅಪರಿಚಿತ ನೀಡಿದ ಚಾಕಲೇಟು ಸೇವಿಸಿದ ಹೊನ್ನಾವರದ ಕುಟುಂಬವೊoದು ಇಡೀ ದಿನ ನಿದ್ರೆಗೆ ಜಾರಿದೆ. ರೈಲ್ವೆ ಪ್ರಯಾಣ ಮುಗಿಸಿ ಮನೆಗೆ ಬಂದ ನಂತರ ಆ ಚಾಕಲೇಟು ತಿಂದ ಕಾರಣ ಅವರೆಲ್ಲರೂ ದರೋಡೆ ಗ್ಯಾಂಗಿನಿAದ ಬಚಾವಾಗಿದ್ದಾರೆ!
ಹೆಸರನ್ನು ಬಹಿರಂಗಪಡಿಸಲು ಇಚ್ಚಿಸದ ಯುವತಿಯೊಬ್ಬರು ತಮ್ಮ ತಂದೆ-ತಾಯಿ ಜೊತೆ ಮೊನ್ನೆ ರೈಲು ಪ್ರಯಾಣ ಮಾಡಿದ್ದರು. ಮಡಗಾಂವಿನಿAದ ಮಂಗಳೂರಿಗೆ ತೆರಳುವ ರೈಲಿನಲ್ಲಿ ಪರಿಚಯವಾದ ಯುವಕನೊಬ್ಬ ಯುವತಿಗೆ ಚಾಕಲೇಟು ನೀಡಿದ್ದು, ಅದನ್ನು ಪ್ರೀತಿಯಿಂದಲೇ ಸ್ವೀಕರಿಸಿದ್ದರು. ಎಲ್ಲರ ಜೊತೆ ಆಪ್ತವಾಗಿ ಮಾತನಾಡಿದ ಆ ಯುವಕ ಹೊನ್ನಾವರ ಯುವತಿಯ ತಂದೆ-ತಾಯಿಗೆ ಸಹ ಆ ಯುವಕ ಚಾಕಲೇಟು ನೀಡಿದ್ದು, ರೈಲಿನಲ್ಲಿ ಅದನ್ನು ಕುಟುಂಬದವರು ತಿಂದಿರಲಿಲ್ಲ. ತಮ್ಮ ಬಳಿಯಿದ್ದ ಬಿಸ್ಕತ್ ತಿಂದು ಆ ಪ್ರಯಾಣ ಮುಗಿಸಿದ ಯುವತಿ ಕುಟುಂಬದವರು ಮನೆಗೆ ಬಂದ ನಂತರ ಚಾಕಲೇಟಿನ ಋಚಿ ಸವಿದಿದ್ದರು.
ಚಾಕಲೇಟು ಸೇವಿಸಿದ ಸ್ವಲ್ಪ ಸಮಯದಲ್ಲಿಯೇ ಆ ಕುಟುಂಬದವರು ನಿದ್ದೆಗೆ ಜಾರಿದರು. ಮರು ದಿನ ಸಂಜೆಯಾದರೂ ಅವರು ನಿದ್ದೆ ಮಂಪರಿನಿAದ ಹೊರಬರಲಿಲ್ಲ. ಪೂರ್ಣ ಪ್ರಮಾಣದಲ್ಲಿ ಎಚ್ಚರವಾದ ನಂತರ ಆ ಕುಟುಂಬದವರಿಗೆ ಚಾಕಲೇಟಿನಲ್ಲಿ ಮತ್ತು ಬರುವ ಔಷಧಿ ಮಿಶ್ರಣವಾಗಿರುವ ಅನುಮಾನ ಮೂಡಿತು. ಎಲ್ಲರಿಗೂ ಒಂದೇ ಅನುಭವವಾಗಿದ್ದರಿಂದ ಅದು ಖಚಿತವಾಯಿತು.
ಕಡಿಮೆ ಪ್ರಯಾಣಿಕರಿರುವ ಬೋಗಿ ಗುರುತಿಸಿ, ಅಲ್ಲಿದ್ದವರ ಬಳಿ ಅತ್ಯಂತ ಆಪ್ತವಾಗಿ ಮಾತನಾಡಿದ ಆ ಅಪರಿಚಿತ ಯುವಕ ವಂಚನೆ ಜಾಲಕ್ಕೆ ಸೇರಿದವ ಎಂಬುದು ಅರಿವಾಯಿತು. ರೈಲಿನಲ್ಲಿ ಚಾಕಲೇಟು ತಿನ್ನದೇ ಇರುವ ಕಾರಣ ಆ ಕುಟುಂಬದವರು ತಮ್ಮ ಬಳಿಯಿದ್ದ ಹಣ, ಮೊಬೈಲ್, ಬಂಗಾರವನ್ನು ಉಳಿಸಿಕೊಂಡರು. ಅದಾದ ನಂತರ ಈ ಬಗ್ಗೆ ಅವರಿವರಲ್ಲಿ ವಿಷಯ ಮುಟ್ಟಿಸಿದ್ದು, ಅಲ್ಲಿನ ನಿವಾಸಿಯೊಬ್ಬರು ಜನ ಜಾಗೃತಿಗಾಗಿ ಈ ವಿಷಯವನ್ನು ಮಾಧ್ಯಮಕ್ಕೆ ತಿಳಿಸಿದರು.