ಕಾರವಾರ ಬಸ್ ನಿಲ್ದಾಣದ ಬಳಿ ಗೋವಾ ಸರಾಯಿ ಮಾರಾಟ ಮಾಡುತ್ತಿದ್ದ ಬಾಲಚಂದ್ರ ಹರಿಕಂತ್ರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ 6310ರೂ ಮೌಲ್ಯದ ಸರಾಯಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ.
ಕೋಡಿಬೀರ ದೇವಸ್ತಾನದ ಬಳಿ ಅಕ್ರಮ ಸರಾಯಿ ಮಾರಾಟ ನಡೆದ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಡಿವೈಎಸ್ಪಿ ಬಿ ಅಶ್ವಿನಿ ಅವರಿಗೆ ಮಾಹಿತಿ ಸಿಕ್ಕಿತು. ಅದರನ್ವಯ ಅವರು ಜೂನ್ 21ರಂದು ಅಲ್ಲಿ ದಾಳಿ ಮಾಡಿದರು. ಈ ವೇಳೆ ಅಲ್ಲಿ ಗೋವಾ ರಾಜ್ಯದಲ್ಲಿ ತಯಾರಾದ ವಿವಿಧ ಬಾಟಲಿಯ ಸರಾಯಿಗಳು ಸಿಕ್ಕಿದವು. ಸರಾಯಿ ದಾಸ್ತಾನು ಮಾಡಿ, ಮಾರಾಟ ಮಾಡುತ್ತಿದ್ದ ಬಾಲಚಂದ್ರ ಹರಿಕಂತ್ರ ವಿರುದ್ಧ ಅವರು ಪ್ರಕರಣ ದಾಖಲಿಸಿಕೊಂಡರು.
ಮಟ್ಕಾ ಅಡ್ಡೆ ಮೇಲೆ ದಾಳಿ
ಕಾರವಾರದ ರಾಮಕೃಷ್ಣ ನಾಯ್ಕ ಅವರು ಮಟ್ಕಾ ಆಡಿಸುವಾಗ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಸಿಪಿಐ ರಮೇಶ ಹೂಗಾರ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಜೂನ್ 21ರಂದು ನಂದನಗದ್ದಾದ ಗಿಂಡಿವಾಡದ ರಾಮಕೃಷ್ಣ ನಾಯ್ಕ ಅವರು ಮಟ್ಕಾ ಆಡಿಸುತ್ತಿದ್ದರು. ಕಾಜುಭಾಗ-ಕೋಡಿಭಾಗ ರಸ್ತೆಯಲ್ಲಿದ್ದ ಅವರನ್ನು ಪೊಲೀಸರು ಹಿಡಿದರು. ಆಗ, ಜನರಿಂದ ಸಂಗ್ರಹಿಸಿದ 2080ರೂ ಸಿಕ್ಕಿದ್ದು, ಅದನ್ನು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು.