ಯಲ್ಲಾಪುರದ ಭಾಗೀರಥಿ ಮರಾಠಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. 32 ಗ್ರಾಂ ಬಂಗಾರ ಹಾಗೂ 1500ರೂ ಹಣವನ್ನು ಕಳ್ಳರು ದೋಚಿದ್ದಾರೆ.
ಹಾಸಣಗಿಯ ಹೊನ್ನಳ್ಳಿಯಲ್ಲಿ ಭಾಗೀರಥಿ ಮರಾಠಿ ಅವರು ವಾಸವಾಗಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿರುವ ಅವರು ಆ ಹಣದಲ್ಲಿ ಬಂಗಾರದ ಒಡವೆಗಳನ್ನು ಮಾಡಿಸಿಕೊಂಡಿದ್ದರು. ಜೂನ್ 21ರಂದು ಅವರ ಮನೆಗೆ ನುಗ್ಗಿದ ಕಳ್ಳರು ಆ ಒಡವೆಯನ್ನು ಅಪಹರಿಸಿ ಪರಾರಿಯಾಗಿದ್ದಾರೆ.
ಮನೆಯ ಕಟಕಿ ಮೂಲಕ ಒಳಗೆ ನುಗ್ಗಿದ ಕಳ್ಳರು ಬೆಡ್ ರೂಂ ಪ್ರವೇಶಿಸಿದ್ದಾರೆ. ಅಲ್ಲಿ ಸೂಟ್‌ಕೇಸ್ ಒಳಗಿದ್ದ ಸಾಮಗ್ರಿಯನ್ನು ಚಲ್ಲಾಪಿಲ್ಲಿಯಾಗಿಸಿದ್ದಾರೆ. ಅದಾದ ನಂತರ ವೆನಿಟಿ ಬ್ಯಾಗಿನಲ್ಲಿದ್ದ ಬಂಗಾರವನ್ನು ಕದ್ದಿದ್ದಾರೆ. 2 ಲಕ್ಷ ರೂ ಮೌಲ್ಯದ ಚಿನ್ನ ಕಳ್ಳತನವಾದ ಬಗ್ಗೆ ಭಾಗೀರಥಿ ಮರಾಠಿ ಅವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.