ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಮುರುಡೇಶ್ವರದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದೆ. ಹೀಗಾಗಿ ಮೈಮಾಟ ಪ್ರದರ್ಶಿಸುವ ಬಟ್ಟೆ ಧರಿಸಿ ಬರುವವರಿಗೆ ದೇಗುಲದ ಒಳಗೆ ಪ್ರವೇಶ ನೀಡಲಾಗುತ್ತಿಲ್ಲ.
2022ರಲ್ಲಿ ಹಿಂದು ಜನಜಾಗೃತಿ ಸಮಿತಿ ಹಾಗೂ ಹಿಂದು ಸಂಘಟನೆಯವರು ವಸ್ತ್ರ ಸಂಹಿತೆ ಜಾರಿಗೆ ಒತ್ತಾಯಿಸಿದ್ದರು. ಅದರ ಪ್ರಕಾರ ದೇಗುಲ ಆಡಳಿತ ಸಮಿತಿ ಕಟ್ಟುನಿಟ್ಟಾದ ನಿಯಮ ಜಾರಿಗೆ ತಂದಿದೆ. ಈ ಬಗ್ಗೆ ಅಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ಅದರ ಪ್ರಕಾರ ಪುರುಷರು ದೋತಿ, ಶಲ್ಯ, ಕುರ್ತಾ, ಫೈಜಾಮ್, ಪಂಚೆ ಅಥವಾ ಶರ್ಟ ಧರಿಸಿ ದೇಗುಲ ಪ್ರವೇಶಿಸಬಹುದಾಗಿದೆ. ಮಹಿಳೆಯರು ಸೀರೆ, ಚೂಡಿದಾರ, ಲಂಗ-ದಾವಣಿ ಧರಿಸಿ ದೇವರ ದರ್ಶನಕ್ಕೆ ಬರಬಹುದಾಗಿದೆ.
ಮುರುಡೇಶ್ವರಕ್ಕೆ ದೇಶ-ವಿದೇಶದಿಂದ ಭಕ್ತರು ಆಗಮಿಸುತ್ತಾರೆ. ಅವರೆಲ್ಲರಿಗೂ ಇಲ್ಲಿ ಇದೇ ನಿಯಮ ಅನ್ವಯವಾಗಲಿದೆ. ವಿದೇಶದಿಂದ ಬರುವವರು ಸಹ ಭಾರತೀಯ ಸಂಸ್ಕೃತಿ ಅನುಸರಿಸಬೇಕಿದ್ದು, ಅವರಿಗೆ ಇಲ್ಲಿ ವಿನಾಯತಿ ಇಲ್ಲ. ಈ ಬಗ್ಗೆ ಪ್ರವೇಶದ್ವಾರದಲ್ಲಿಯೇ ನಾಮಫಲಕ ಅಳವಡಿಸಲಾಗಿದ್ದು, ಅದನ್ನು ಓದಿಯೂ ಮುಂದೆ ಬರುವವರಿಗೆ ಆಡಳಿತ ಮಂಡಳಿಯವರು ಎಚ್ಚರಿಕೆ ನೀಡುತ್ತಿದ್ದಾರೆ.
ಇನ್ನೂ ಭಾರತೀಯ ಉಡುಗೆ-ತೊಡುಗೆಗಳು ಅಲ್ಲಿನ ಮಾರುಕಟ್ಟೆಯಲ್ಲಿ ಸಹ ಸಿಗುತ್ತವೆ. ಕಡಲತೀರ ಪ್ರವೇಶಕ್ಕೆ ಅಗತ್ಯವಿರುವ ಉಡುಪುಗಳು ಅಲ್ಲಿ ಸಿಗುತ್ತವೆ.