`ಪರಿಪೂರ್ಣ ಶಿಕ್ಷಣದ ಜೊತೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಂಘ-ಸoಸ್ಥೆಗಳು ಸಹಕಾರಿ’ ಎಂದು ಕಾರವಾರ ಧರ್ಮಪ್ರಾಂತೀಯ ಶಿಕ್ಷಣ ಸಂಸ್ಥೆಯ ಸಂಚಾಲಕ ಫಾದರ್ ರೋನಿ ರೋಡ್ರಿಗಸ ಹೇಳಿದ್ದಾರೆ.
ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಸಾಂಸ್ಕೃತಿಕ ಹಾಗೂ ವಿವಿಧ ಸಂಘಗಳ ವಾರ್ಷಿಕ ಚಟುವಟಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು `ನಮ್ಮ ಸಂಸ್ಥೆ ಮಕ್ಕಳಿಗೆ ಪರಿಪೂರ್ಣವಾದ ಶಿಕ್ಷಣ ಕೊಡಲು ಬಯಸುತ್ತದೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ಸಮಾಜದಲ್ಲಿ ಉನ್ನತ ಸ್ಥಾನಗಳಿಸಬೇಕು’ ಎಂದು ಕರೆ ನೀಡಿದರು.
`ಸಮಾಜದಲ್ಲಿ ಉನ್ನತ ಸ್ಥಾನಪಡೆಯಲು ವಿದ್ಯಾರ್ಥಿ ಜೀವನದಲ್ಲಿಯೇ ಶ್ರಮಿಸಬೇಕು. ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿಯೂ ಭಾಗವಹಿಸಬೇಕು. ಒಳ್ಳೆಯ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕರೆ ನೀಡಿದರು. ಸಂಸ್ಥೆಯಿoದ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿದ ಅವರು ಶಾಲೆಯ ಸಂಘಗಳ ಬಾವುಟವನ್ನು ಹಸ್ತಾಂತರಿಸಿದರು. ಎಸ್ ಎಸ್ ಎಲ್ ಸಿ ಮಕ್ಕಳಿಗೆ ಉತ್ತಮ ಅಂಕಪಡೆಯುವoತೆ ಕಿವಿಮಾತು ಹೇಳಿದರು. ಈ ವೇಳೆ ಅವರು ಶಿಕ್ಷಣ ಸಂಸ್ಥೆಗೆ ಸಹಾಯ ಮಾಡುವ ಘೋಷಣೆ ಮಾಡಿದರು.
ಶಾಲಾ ಮುಖ್ಯೋಧ್ಯಾಪಕ ಫಾದರ್ ರೆಮಂಡ್ ಫರ್ನಾಂಡಿಸ್, ಶಿಕ್ಷಕರಾದ ಚಂದ್ರಶೇಖರ, ರಾಜಶೇಖರ, ನೆಲ್ಸನ್, ವೆಂಕಟರಮಣ ಹಾಗೂ ಮಲ್ಲಿಕಾರ್ಜುನ ಅವರು ವೇದಿಕೆಯ ಜವಾಬ್ದಾರಿ ನಿಭಾಯಿಸಿದರು.