ಶಿರಸಿಯಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಪವನ್ ಜೋಗಿ ಮತ್ತಿಘಟ್ಟಾದ ಜೋಗನಕಲ್ಲು ಜಲಪಾತದಲ್ಲಿ ಕಾಣೆಯಾಗಿದ್ದಾರೆ. ನಿನ್ನೆಯಿಂದ ಅವರ ಹುಡುಕಾಟ ನಡೆದಿದ್ದು, ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.
ಶಿರಸಿ ಸೋಮನಳ್ಳಿ ಬಳಿಯ ಉಂಬಳಿಕೊಪ್ಪದ ಪವನ್ ಜೋಗಿ ಅವರು ತಮ್ಮ ಸ್ನೇಹಿತ ವಾಸುದೇವ ನಾಯ್ಕರ ಜೊತೆ ಸೋಮವಾರ ಸಂಜೆ ಜಲಪಾತ ವೀಕ್ಷಣೆಗೆ ಹೋಗಿದ್ದರು. ಜಲಪಾತ ಸಮೀಪದ ಹಳ್ಳ ದಾಟುವಾಗ ಪವನ್ ಅವರು ಕಾಲು ಜಾರಿ ನೀರಿಗೆ ಬಿದ್ದರು. ರಭಸ ನೀರಿಗೆ ಅವರು ಕೊಚ್ಚಿ ಹೋಗಿದ್ದು, ಸೋಮವಾರ ಸಂಜೆಯಿAದಲೇ ಅವರ ಹುಡುಕಾಟ ನಡೆಯುತ್ತಿದೆ.
ಸದ್ಯ ಪೊಲೀಸರು, ಮುಳುಗು ತಜ್ಞರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿದ್ದಾರೆ. ಧಾರಾಕಾರ ಮಳೆ ಸುರಿಯುತ್ತಿದ್ದು ಹುಡುಕಾಟಕ್ಕೆ ಸಮಸ್ಯೆಯಾಗಿದೆ. ಅದಾಗಿಯೂ ಅಲ್ಲಿ ನಿರಂತರ ಶೋಧ ನಡೆಯುತ್ತಿದೆ. ಮೊಬೈಲ್ ಸಿಗ್ನಲ್ ಸಹ ಸಿಗದ ಕಾಡಿನಲ್ಲಿ ಸಂಪರ್ಕ ಸಮಸ್ಯೆ ಎದುರಾಗಿದೆ.
ಪವನ್ ಪಾಲಕರು ಸಹ ಸ್ಥಳದಲ್ಲಿದ್ದಾರೆ. ಸಂಬ0ಧಿಕರು ಹುಡುಕಾಟದಲ್ಲಿ ತೊಡಗಿದ್ದಾರೆ. ಶಿರಸಿ ಗ್ರಾಮೀಣ ಠಾಣೆಗೆ ಆಗಮಿಸಿದ ಪವನ್ ಅವರ ಸಹೋದರ ಪ್ರವೀಣ ಜೋಗಿ ಪೊಲೀಸರಿಗೆ ಸಹೋದರ ಕಾಣೆಯಾದ ವಿಷಯ ಮುಟ್ಟಿಸಿದ್ದರು. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.