ಹೊನ್ನಾವರದ ಅಬಕಾರಿ ಅಧಿಕಾರಿಗಳು ಮಂಡ್ಯಕ್ಕೆ ರವಾನೆಯಾಗುತ್ತಿದ್ದ ಗೋವಾ ಸರಾಯಿ ಹಿಡಿದಿದ್ದಾರೆ. ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಮಂಡ್ಯದ ಪುಟ್ಟ ಗೌಡ ಹಾಗೂ ಕೀರ್ತಿಕುಮಾರ್ ಎಂಬಾತರು ಗೋವಾ ಪ್ರವಾಸಕ್ಕೆ ಬಂದಿದ್ದರು. ಅಲ್ಲಿಂದ ಮರಳುವಾಗ ಗೋವಾದ ಸರಾಯಿ ಖರೀದಿಸಿದ್ದರು. ಸ್ನೇಹಿತರಿಗಾಗಿ ಅವರು ಸಾಕಷ್ಟು ಖರಿದಿ ಮಾಡಿದ್ದರು. ಬಗೆ ಬಗೆಯ ಬಾಟಲಿಗಳನ್ನು ಟೆಂಪೋದಲ್ಲಿರಿಸಿಕೊAಡು ಪ್ರಯಾಣ ಮುಂದುವರೆಸಿದ್ದರು. ಗೋವಾದಿಂದ ಕರ್ನಾಟಕ ಪ್ರವೇಶಿಸಿದ ಅವರನ್ನು ಹೊನ್ನಾವರದ ಕರ್ಕಿ ಬಳಿ ಅಬಕಾರಿ ಸಿಬ್ಬಂದಿ ತಡೆದರು.
ವಾಹನ ತಪಾಸಣೆ ನಡೆಸಿದಾಗ ಅಲ್ಲಿ ವಿವಿಧ ಮದ್ಯದ ಬಾಟಲಿಗಳಿದ್ದವು. `ನಾವು ದುಡ್ಡು ಕೊಟ್ಟು ತಂದಿದ್ದೇವೆ’ ಎಂದು ಅವರಿಬ್ಬರು ವಾದಿಸಿದರು. `ಗೋವಾ ಸರಾಯಿಗೆ ದುಡ್ಡು ಕೊಟ್ಟಿದ್ದರೂ ಅದನ್ನು ಕರ್ನಾಟಕಕ್ಕೆ ತರುವುದು ಅಪರಾಧ’ ಎಂದು ಅಬಕಾರಿ ಸಿಬ್ಬಂದಿ ಹೇಳಿದರು. 32 ಲೀಟರ್ ಸರಾಯಿ ಬಾಟಲಿಗಳನ್ನು ವಶಕ್ಕೆ ಪಡೆದರು. ಅವರಿಬ್ಬರನ್ನು ಬಂಧಿಸಿದರು.