ಕಾರವಾರದ ಕಾಳಿ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿದ್ದ ಸೀಬರ್ಡ ನೌಕಾನೆಲೆ ಉದ್ಯೋಗಿಯೊಬ್ಬರು ಸಾವನಪ್ಪಿದ್ದಾರೆ.
ಕಾರವಾರದ ಕಣಸಗೇರಿ ಭಂಡರಿವಾಡದ ಮಹಾದೇವಸ್ಥಾನ ಹತ್ತಿರ ಗಗನ ಗಜನೀಕರ (21) ವಾಸವಾಗಿದ್ದರು. ಅವರು ಸೀಬರ್ಡನಲ್ಲಿ ತಾತ್ಕಾಲಿಕ ಕೆಲಸ ಮಾಡಿಕೊಂಡಿದ್ದರು. ಜೂನ್ 22ರ ಭಾನುವಾರ ಬೆಳಗ್ಗೆ ತಂದೆ ಜೊತೆ ಮೀನು ಹಿಡಿಯಲು ಹೋಗಿದ್ದರು.
ಸದಾಶಿವಗಡ ಕಣಸಗೇರಿಯಲ್ಲಿ ಕೊಂಕಣವಾಡ ಕಡೆ ಹೊರಟ ಗುರುನಾಥ ಗಜನೀಕರ್ ಹಾಗೂ ಗಗನ ಗಜನೀಕರ ಅಲ್ಲಿನ ಮೀಟಾ ಆಗರ ಬಳಿ ಮೀನು ಹಿಡಿಯುತ್ತಿದ್ದರು. ಶೆಟ್ಲಿ ಮೀನುಗಳಿಗೆ ಗುರಿಯಾಗಿಸಿಕೊಂಡು ಅವರು ಶಿಖಾರಿ ಮಾಡುತ್ತಿದ್ದರು. ಕಾಳಿ ನದಿ ಹಿನ್ನೀರಿನ ಪ್ರದೇಶದಲ್ಲಿ ಬರಪೂರ ಮೀನು ಸಿಕ್ಕಿದ್ದು, ಅಲ್ಲಿಂದ ಮರಳುವ ವೇಳೆ ಗಗನ ಗಜನೀಕರ ನೀರಿನಲ್ಲಿ ಮುಳುಗಿದರು.
ಇದನ್ನು ನೋಡಿದ ಗಗನ ಅವರ ತಂದೆ ಗುರುನಾಥ ಗಜನೀಕರ್ ದೊಡ್ಡದಾಗಿ ಬೊಬ್ಬೆ ಹಾಕಿದರು. ಆಗ, ಅಕ್ಕಪಕ್ಕದವರು ಅಲ್ಲಿಗೆ ಬಂದು ನೀರಿನಲ್ಲಿ ಮುಳುಗಿದ ಗಗನ್ ಅವರನ್ನು ಮೇಲೆತ್ತಿದರು. ಆದರೆ, ಅಷ್ಟರೊಳಗೆ ಗಗನ್ ಗಜನೀಕರ್ ಕೊನೆಉಸಿರೆಳೆದಿದ್ದರು.