ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಅತ್ಲೇಟಿಕ್ ಪಂದ್ಯಾಟದಲ್ಲಿ ಭಾಗವಹಿಸಿದ ಶಿರಸಿಯ ರಕ್ಷಿತ ರವೀಂದ್ರ ಅವರು 52.17 ಸೆಕೆಂಡಿನಲ್ಲಿ 400 ಮೀಟರ್ ಓಡಿದ್ದಾರೆ. ಆ ಮೂಲಕ ಅವರು ಎರಡನೇ ಸ್ಥಾನಗಳಿಸಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ರಕ್ಷಿತ್ ರವೀಂದ್ರ ಅವರು ಉತ್ತರ ಕನ್ನಡ ಜಿಲ್ಲಾ ಅತ್ಲೇಟಿಕ್ ಅಸೋಸಿಯೇಶನ್ ಸದಸ್ಯರಾಗಿದ್ದಾರೆ. ಕೇಂದ್ರ ಸರ್ಕಾರದ ಕ್ರೀಡಾ ಪ್ರಾಧಿಕಾರದಲ್ಲಿ ಅವರು ತರಬೇತಿಪಡೆಯುತ್ತಿದ್ದಾರೆ. ಒಲಂಪಿಯನ್ ಅಶ್ವಿನಿ ಅಕ್ಕುಂಜಿ ಅವರು ರಕ್ಷಿತ್ ಅವರಿಗೆ ಮಾರ್ಗದರ್ಶಕರಾಗಿದ್ದಾರೆ.
ರಕ್ಷಿತ್ ಅವರ ಸಾಧನೆ ಸುದ್ದಿ ಕೇಳಿ ಉತ್ತರಕನ್ನಡ ಜಿಲ್ಲಾ ಅತ್ಲೇಟಿಕ್ ಅಸೋಸಿಯೇಶನ್ ಅಧ್ಯಕ್ಷ ಸದಾನಂದ ನಾಯ್ಕ ಮತ್ತು ಕಾರ್ಯದರ್ಶಿ ಕೆ ಆರ್ ನಾಯ್ಕ ಸಂತಸವ್ಯಕ್ತಪಡಿಸಿದರು.