`ಪ್ರವಾಸೋದ್ಯಮ ನಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಚಿನ್ನದ ಗುರುತು. ದೇಶ-ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುವ ಶಕ್ತಿ ಈ ಜಿಲ್ಲೆಗಿದೆ. ಆದರೆ, ಇಲ್ಲಿಗೆ ಬರುವ ಪ್ರವಾಸಿಗರನ್ನು ಉಳಿಸಿಕೊಳ್ಳುವ ಆತಿಥ್ಯವನ್ನು ನೀಡುವ Resort, Homestay’ಗಳು ಸಾಕಷ್ಟು ಇದ್ದರೂ ಕೂಡ ಅವರು ಮತ್ತೆ ಮತ್ತೆ ಇಲ್ಲಿಗೆ ಬರುವಂತೆ ಮಾಡುವ ಶಕ್ತಿಯ ಕೊರತೆಯಿದ್ದು, ಅವರನ್ನು ಮತ್ತೆ ಮತ್ತೆ ಆಕರ್ಷಿಸುವ ಕೆಲಸ ಪ್ರವಾಸೋದ್ಯಮ ಕ್ಷೇತ್ರದಲ್ಲಿರುವವರಿಗೆ ಆ ಬಗ್ಗೆ ತರಬೇತಿ ಹಾಗೂ ಮಾಹಿತಿ ನೀಡುವ ಸಂಸ್ಥೆ ನಮ್ಮದು’ ಎನ್ನುತ್ತ ಮಾತು ಶುರು ಮಾಡಿದರು ಶಿರಸಿಯ ಸುಹಾಸ್.
ಕಳೆದ 20 ವರ್ಷಗಳಿಂದ ಪ್ರವಾಸೋದ್ಯಮದಲ್ಲಿ ನಾನಾ ಬಗೆಯ ಸಾಹಸಗಳನ್ನು ಮಾಡಿದ ಸುಹಾಸ್ 20 ವರ್ಷಗಳಿಂದ `ಟ್ರೆಕ್’ ಎಂಬ ಸಂಸ್ಥೆಯನ್ನು ಮುನ್ನೆಡೆಸುತ್ತಿದ್ದಾರೆ. ಪ್ರವಾಸೋದ್ಯಮ ಚಟುವಟಿಕೆಯಲ್ಲಿರುವವರಿಗೆ ಸೂಕ್ತ ಮಾರ್ಗದರ್ಶನ, ಡಿಜಿಟಲ್ ಮಿಡಿಯಾ (Digital Media) ಬಳಕೆ, ರೆಸಾರ್ಟ ಹಾಗೂ ಹೋಂ ಸ್ಟೇ ಸಿಬ್ಬಂದಿಗೆ ಅತಿಥಿ ಸತ್ಕಾರ ಕುರಿತು ಸೂಕ್ತ ತರಬೇತಿ ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶ. ಜೊತೆಗೆ ರೆಸಾರ್ಟಗಳಿಗೆ ಪ್ರವಾಸಿಗರನ್ನು ಆಕರ್ಷಿಸುವ ವಿಧಾನಗಳ ಬಗ್ಗೆಯೂ ಅವರು ಹೇಳಿಕೊಡುತ್ತಾರೆ.

ಎಲ್ಲಾ ಬಗೆಯ ಸಾಮಾಜಿಕ ಜಾಲತಾಣ ವಿಷಯದಲ್ಲಿ `ಟ್ರೆಕ್’ ಸಂಸ್ಥೆ Resort ಗಳ ಬೆನ್ನೆಲುಬಾಗಿ ನಿಲ್ಲುತ್ತದೆ. ಪ್ರವಾಸೋದ್ಯಮ ದ ಡಿಜಿಟಲ್ ಮೀಡಿಯವನ್ನು ಸಂಪೂರ್ಣವಾಗಿ ಕೌಶ್ಯಲ್ಯತೆಯ ಮೂಲಕ ನಡೆಸುವ ಒಂದು ಕೌಶಲ್ಯಯುತ ತಂಡವೇ ಅವರ ಜೊತೆಯಲ್ಲಿ ಇದೆ.
ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಪ್ರವಾಸಿಗರನ್ನು ಆಕರ್ಷಿಸಲು ಅಗತ್ಯವಿರುವ ವಿಡಿಯೋ, ಲೇಖನಗಳನ್ನು ಈ ಸಂಸ್ಥೆ ಸಿದ್ಧಪಡಿಸಿಕೊಡುತ್ತದೆ. ಸ್ಥಳೀಯ ಆಹಾರ ಉತ್ಪನ್ನಗಳ ಬಗ್ಗೆ ಪರ ಊರಿನವರಿಗೆ ಪ್ರೀತಿ ಹುಟ್ಟಿಸಿ ಉತ್ತಮ ಮಾರುಕಟ್ಟೆಯನ್ನು ಒದಗಿಸುತ್ತದೆ. ಒಟ್ಟಾರೆಯಾಗಿ `ಡಿಜಿಟಲ್ ರೆಪ್ಯುಟೇಶನ್ ಮ್ಯಾನೇಜಮೆಂಟ್’ (Digital Reputation Management) ಕೆಲಸವನ್ನು ಕಳೆದ 7 ವರ್ಷಗಳಿಂದ `ಟ್ರೆಕ್’ ಸಂಸ್ಥೆ ಮಾಡುತ್ತಿದೆ. ಕರ್ನಾಟಕ ಹಾಗೂ ಮಹಾರಾಷ್ಟದ 70ಕ್ಕೂ ಅಧಿಕ Resortಗಳಿಗೆ ತೃಪ್ತಿ ಆಗುವ ರೀತಿ ಸೇವೆ ನೀಡುತ್ತಿರುವ ಹಿರಿಮೆ `ಟ್ರೆಕ್’ ಸಂಸ್ಥೆಯದ್ದಾಗಿದೆ.

ಅನೇಕ Resortಗಳಿಗೆ ಸಾಮಾಜಿಕ ಜಾಲತಾಣಗಳ ಬಗ್ಗೆ ಹೆಚ್ಚಿನ ಅರಿವಿಲ್ಲ. ಕೆಲವರಿಗೆ ಅರಿವಿದ್ದರೂ ಅದರ ಮೂಲಕ ಪ್ರವಾಸಿಗರನ್ನು ಸೆಳೆಯಲು ಸಮಯವಿಲ್ಲ. ಅಂಥವರಿಗೆ `ಟ್ರೆಕ್’ ಸಂಸ್ಥೆ ನೆರವು ನೀಡುತ್ತದೆ. ಪ್ರವಾಸೋದ್ಯಮಿಗಳ ರೆಸಾರ್ಟ ಅಥವಾ ಹೋಂ ಸ್ಟೇ ಹೆಸರಿನಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆದು ಅದರ ಮೂಲಕ ಆಸಕ್ತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬೇರೆ ಬೇರೆ ದೇಶಗಳಲ್ಲಿರುವ ಪ್ರವಾಸಿಗರ ಬಗ್ಗೆ ಅಧ್ಯಯನ ನಡೆಸಿ, ಅವರ ಆಗುಹೋಗುಗಳ ಬಗ್ಗೆ ಅರಿತು ಅವರನ್ನು ಇಲ್ಲಿನ ರೆಸಾರ್ಟಗಳಿಗೆ ಸಂಪರ್ಕ ಬೆಸೆಯುವ ಕೆಲಸವನ್ನು `ಟ್ರೆಕ್’ ಸಂಸ್ಥೆ ಮಾಡುತ್ತಿದೆ.
ನಮ್ಮನೆಗೆ ಬನ್ನಿ!
ಮಾಹಿತಿಪೂರ್ಣ ಚಾರಣ, ಪೃಕೃತಿ ಶಿಬಿರಗಳನ್ನು ಆಯೋಜಿಸಿ ಅನುಭವ ಇರುವ ಸುಹಾಸ್ ಹೆಗಡೆ ಜಿಲ್ಲೆಯ ಪ್ರವಾಸಿತಾಣಗಳ ಬಗ್ಗೆ ದಶಕಗಳ ಹಿಂದೆಯೇ ಪುಸ್ತಕವೊಂದನ್ನು ಪರಿಚಯಿಸಿದ್ದರು. `ನಮ್ಮನೆಗೆ ಬನ್ನಿ!’ ಎನ್ನುತ್ತ ಬೇರೆ ಬೇರೆ ಊರಿನ ಪ್ರವಾಸಿಗರನ್ನು ಇಲ್ಲಿ ಕರೆತಂದು ಆತಿಥ್ಯ ನೀಡುತ್ತಿದ್ದವರು. ಇದೀಗ ಇನ್ನೂ ಒಂದು ಹೆಜ್ಜೆ ಮುನ್ನಡೆದು ಯಾವ ದೇಶದ ಪ್ರವಾಸಿಗರು ಯಾವ ದೇಶಕ್ಕೆ ಬರಲು ಆಸಕ್ತರಾಗಿದ್ದಾರೆ? ಎಂಬುದನ್ನು ಅಭ್ಯಯಿಸಿ ಅವರನ್ನು ಇಲ್ಲಿನ ಸಂಸ್ಕೃತಿಯ ಜೊತೆ ಬೆಸೆಯುವ ಕೆಲಸ ಮಾಡುತ್ತಿದ್ದಾರೆ. ಕರಾವಳಿ ಹಾಗೂ ಮಲೆನಾಡಿನ ವಿಭಿನ್ನ ಆಚರಣೆಯನ್ನು ಪರಿಚಯಿಸಲು ಆಸಕ್ತರಿರುವ ಪ್ರವಾಸೋದ್ಯಮಿಗಳಿಗಾಗಿ `ಟೂರಿಸಮ್ ರಿಲೆಟೆಡ್ ಎಂಟ್ರಟೇನ್ಮೆAಟ್ ಕಂಪನಿ’ಯನ್ನು ಮುನ್ನಡೆಸುತ್ತಿದ್ದಾರೆ.
ರೆಸಾರ್ಟ ಹಾಗೂ ಹೋಂಸ್ಟೆಗಳ ಡಿಜಿಟಲ್ ಹಾಗೂ ಸೋಶಿಯಲ್ ಮೀಡಿಯಾಗಳನ್ನು ಸಂಪೂರ್ಣವಾಗಿ, ಕೌಶಲ್ಯಭರಿತವಾಗಿ ಮುನ್ನಡೆಸಲು ಇವರನ್ನು ಸಂಪರ್ಕಿಸಬಹುದು
`ಟ್ರೆಕ್’ ಸಂಸ್ಥೆಯ ವೆಬ್: www.travelcicada.com
`ಟ್ರೆಕ್’ ಸಂಸ್ಥೆಯ ಮೋ: 9448331531
Sponsored
Discussion about this post