ಯಲ್ಲಾಪುರ: ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಯಲ್ಲಾಪುರ ಪೊಲೀಸರು ಗುಜರಾತಿನಲ್ಲಿ ಬಂಧಿಸಿದ್ದಾರೆ.
ಗುಜರಾತ ಗೋದ್ರಾದ ರಾಜೇಂದ್ರ ಬಾಪು ಅಮರಸಿಂಗ್ ವಘೇಲಾ ಬಂಧಿತ ವ್ಯಕ್ತಿ. ಪ್ರಕರಣವೊಂದರ ವಿಚಾರಣೆಗೆ ಕಳೆದ 12 ವರ್ಷಗಳಿಂದ ಬಾರದೇ ತಪ್ಪಿಸಿಕೊಂಡಿದ್ದ ಈತನನ್ನು ಗುಜರಾತಿನಲ್ಲಿ ಯಲ್ಲಾಪುರ ಪಿಎಸ್ಐ ಸಿದ್ದಪ್ಪ ಗುಡಿ, ಸಿಬ್ಬಂದಿ ಶಫೀ ಶೇಖ, ಗಿರೀಶ ಲಮಾಣಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.