ಯಲ್ಲಾಪುರ: ತಾಲೂಕಿನ ಮಾಗೋಡ ಕಾಲೋನಿಯ ಶ್ರೀ ವೀರಮಾರುತಿ ದೇವಸ್ಥಾನದಲ್ಲಿ ಆಷಾಢ ಏಕಾದಶಿ ಪ್ರಯುಕ್ತ ನಡೆದ ‘ಯಕ್ಷತ್ರಯ’ ಕಾರ್ಯಕ್ರಮ ನಡೆಯಿತು.
ಶ್ರೀ ವೀರಮಾರುತಿ ತಾಳಮದ್ದಲೆ ಕೂಟದ ಕಲಾವಿದರು ವಾಲಿ ಮೋಕ್ಷ, ಗಜೇಂದ್ರ ಮೋಕ್ಷ, ತ್ಯಾಗತಪೋಧನ ದಧೀಚಿ ತಾಳಮದ್ದಲೆ ಪ್ರಸ್ತುತಪಡಿಸಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ಮಹಾಬಲೇಶ್ವರ ಭಟ್ಟ ಬೆಳಶೇರು, ಚಂದ್ರಶೇಖರ ಹೆಗಡೆ ಕುಂಟೆಮನೆ, ಮಂಜುನಾಥ ಭಟ್ಟ ದೇವದಮನೆ, ಮದ್ದಲೆವಾದಕರಾಗಿ ವಿಶ್ವೇಶ್ವರ ಹೆಬ್ಬಾರ ಹಾಲೆಪಾಲ, ನಾಗಪ್ಪ ಕೋಮಾರ, ವಿನಾಯಕ ಹೆಗಡೆ ಕುಳಿಮಾಗೋಡ, ಚಂಡೆವಾದಕರಾಗಿ ಸಂಜಯ ಕೋಮಾರ, ನಾಗರಾಜ ಭಟ್ಟ ಭಾಗವಹಿಸಿದ್ದರು.
ವಾಲಿ ಮೋಕ್ಷದ ರಾಮನಾಗಿ ನರಸಿಂಹ ಕೋಣೆಮನೆ, ವಾಲಿಯಾಗಿ ನಾರಾಯಣ ಭಟ್ಟ ಮೊಟ್ಟೆಪಾಲ, ಸುಗ್ರೀವನಾಗಿ ಶ್ರೀಧರ ಅಣಲಗಾರ, ಹನುಮಂತನಾಗಿ ದೀಪಕ ಭಟ್ಟ ಕುಂಕಿ, ತಾರೆಯಾಗಿ ಎಂ.ಎನ್.ಭಟ್ಟ ಪಾತ್ರ ನಿರ್ವಹಿಸಿದರು. ಗಜೇಂದ್ರ ಮೋಕ್ಷದ ಗಜೇಂದ್ರನಾಗಿ ಮಹೇಶ ಭಟ್ಟ ಇಡಗುಂದಿ, ಮಕರನಾಗಿ ನಾಗರಾಜ ಭಟ್ಟ ಕುಂಕಿಪಾಲ, ವಿಷ್ಣುವಾಗಿ ಶಿವರಾಮ ಭಾಗ್ವತ ಮಣ್ಕುಳಿ, ಲಕ್ಷ್ಮಿಯಾಗಿ ಗೋಪಾಲಕೃಷ್ಣ ಭಟ್ಟ ಕಬ್ಬಿನಕುಂಬ್ರಿ ಪಾತ್ರ ಚಿತ್ರಣ ನೀಡಿದರು.
ತ್ಯಾಗತಪೋಧನ ದಧೀಚಿ ಪ್ರಸಂಗದಲ್ಲಿ ಧದೀಚಿಯಾಗಿ ನರಸಿಂಹ ಭಟ್ಟ ಕುಂಕಿಮನೆ, ವ್ರತ್ರನಾಗಿ ಶಿವರಾಮ ಭಟ್ಟ ಮೊಟ್ಟೆಗದ್ದೆ, ದೇವೇಂದ್ರನಾಗಿ ಮಂಜುನಾಥ ಜೋಶಿ, ವಿಷ್ಣುವಾಗಿ ನಾರಾಯಣ ಭಟ್ಟ ಕಿರಕುಂಭತ್ತಿ ಪಾತ್ರ ನಿರ್ವಹಿಸಿದರು.
ಅಚ್ಚುಕಟ್ಟಾದ, ಶಿಸ್ತಿನ ಸಂಘಟನೆಗೆ ಹೆಸರಾದ ತಾಳಮದ್ದಲೆ ಕೂಟ, ಮತ್ತೊಂದು ಮಾದರಿಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಜನರ ಮೆಚ್ಚುಗೆಗೆ ಪಾತ್ರವಾಯಿತು.