ಮಹಿಳಾ ಪತಂಜಲಿ ಯೋಗಸಮಿತಿ ಯಲ್ಲಾಪುರ, ಓಂಕಾರ ಯೋಗ ಕೇಂದ್ರ ರವೀಂದ್ರ ನಗರ ಹಾಗೂ ಮೈತ್ರೀ ಸಂಸ್ಕೃತ – ಸಂಸ್ಕೃತಿ ಪ್ರತಿಷ್ಠಾನಮ್(ರಿ) ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ “ಧ್ಯಾನ ಲಹರೀ” – “ಮುದ್ರೆ ಮತ್ತು ಪ್ರಾಣಾಯಾಮದೊಂದಿಗೆ ಸೌಂದರ್ಯಲಹರೀ ಉಪಾಸನೆಯ ಪ್ರಾಯೋಗಿಕ ಕಾರ್ಯಕ್ರಮವು ಸೋಮವಾರ ಸಂಜೆ ಯಲ್ಲಾಪುರದ “ಉಪಾಸನಾ” ದಲ್ಲಿ (ಸುಮಾ ಹಾಗೂ ಉಮೇಶ್ ಭಟ್ ಏಕಾನ ರವರ ನಿವಾಸ ನಾಯಕನ ಕೆರೆ ಯಲ್ಲಿ ಜರುಗಿತು.
ಉದ್ಘಾಟಕರಾಗಿ ಮೂಲತಃ ಯಲ್ಲಾಪುರದವರಾದ ಪ್ರಸ್ತುತ ಬೆಂಗಳೂರಿನ MLA ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಹೆಗಡೆ ಅವರು ಆಗಮಿಸಿದ್ದರು. ಯೋಗ ಮಾಡಲು ಯೋಗ ಹಾಗೂ ಯೋಗ್ಯತೆ ಎರಡೂ ಇರಬೇಕು. ಆರೋಗ್ಯವನ್ನು ಸರಿಪಡಿಸಿಕೊಳ್ಳಲು ಮಾತ್ರ ಯೋಗವನ್ನು ಬಳಸುವುದಲ್ಲ. ಯೋಗದ ಮೊದಲ ಸೂತ್ರ ಯೋಗಃ ಚಿತ್ತವೃತ್ತಿ ನಿರೋಧಃ ಚಂಚಲವಾದ ಮನವನ್ನು ಯೋಗದ ಮೂಲಕ ಏಕಾಗ್ರಗೊಳಿಸಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎನ್ನುವುದು ಪತಂಜಲಿಗಳ ಸಂದೇಶ ಮುದ್ರೆಗಳು ಆರೋಗ್ಯ ವರ್ಧಿಸುವುದರ ಜೊತೆಗೆ ಮಾನಸಿಕವಾಗಿ ಮತ್ತುಆಧ್ಯಾತ್ಮಿಕವಾಗಿ ಉನ್ನತ ಮಟ್ಟಕ್ಕೆ ಒಯ್ಯುವ ಸಾಧನವಾಗಿದೆ. ಈ ನಿಟ್ಟಿನಲ್ಲಿ ಸೌಂದರ್ಯಲಹರಿಯಲ್ಲಿ ಸಪ್ತಚಕ್ರಗಳ ಕುರಿತು ವರ್ಣಿಸಲಾದ ಪ್ರಮುಖ ಶ್ಲೋಕಗಳನ್ನು ಆರಿಸಿ ಅದಕ್ಕೆ ತಕ್ಕ ಮುದ್ರೆಗಳೊಂದಿಗೆ ಧ್ಯಾನವನ್ನು ಮಾಡುವ ವಿನೂತನ ಸಂಯೋಜನೆಯನ್ನು ಯೋಗಸಾಧಕ ಶ್ರೀ ಸುಬ್ರಾಯ ಭಟ್ಟರು ಜನತೆಗೆ ನೀಡಿದ್ದಾರೆ ಎಂದು ತಮ್ಮ ಮಾತುಗಳಲ್ಲಿ ಹೆಗಡೆಯವರು ಪ್ರಾಯೋಗಿಕ ಕಾರ್ಯಕ್ರಮವನ್ನು ಶ್ಲಾಘಿಸಿದರು.
ವಿ ಎನ್ ಭಟ್ ಏಕ ಅಧ್ಯಕ್ಷತೆ ವಹಿಸಿ ಮಹಿಳೆಯರು ಯೋಗ ಮಾಡೋದ್ರಿಂದ ಕುಟುಂಬದಲ್ಲಿ ಆ ಮೂಲಕ ಸಮಾಜದಲ್ಲಿ ಆರೋಗ್ಯಪೂರ್ಣ ವಾತಾವರಣ ನಿರ್ಮಾಣ ಆಗುತ್ತದೆ ಎಂದುಮಾತನಾಡಿದರು ಅತಿಥಿಗಳಾಗಿ ಆಕ್ಯುಪ್ರೆಷರ್ ಚಿಕಿತ್ಸಕಿ ಗೀತಾ ವೈದ್ಯ ಹಾಗೂ ಮಹಿಳಾ ಪ್ರಭಾರಿ ಶೈಲಶ್ರೀ ಭಟ್ ವೇದಿಕೆಯಲ್ಲಿ ಇದ್ದರು ಮೈತ್ರೀ ಪ್ರತಿಷ್ಠಾನದವತಿಯಿಂದ ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಿದ ಶ್ರೀ ನಾರಾಯಣ ಭಟ್ ಏಕಾನ್ ದಂಪತಿಗಳನ್ನು ಹಾಗೂ ಕಾರ್ಯಕ್ರಮದ ಸಂಯೋಜಕ ಹಾಗೂ ಯೋಗ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿರುವ ಸುಬ್ರಾಯ ಭಟ್ಟರನ್ನು ಸನ್ಮಾನಿಸಲಾಯಿತು.
ಶ್ರೀಮತಿಯರಾದಆಶಾ ಬಗನಗದ್ದೆ ಸಂಧ್ಯಾ ಹೆಗಡೆ ಸರೋಜಾ ಹೆಗಡೆ ಗಂಗಾ ಭಟ್ ಸುಮಾ ಭಟ್ ಸೌಂದರ್ಯಲಹರೀ ಪಠಣ ಸ್ಪಷ್ಟ ಹಾಗೂ ಸುಶ್ರಾವ್ಯವಾಗಿ ಮಾಡಿದರು. ಸುಬ್ರಾಯ ಭಟ್ ಶ್ಲೋಕಗಳಿಗೆ ಅರ್ಥ ಹೇಳಿ ಚಕ್ರಗಳಿಗೆ ಮುದ್ರೆ ಸಂಯೋಜಿಸಿದರು.ಕುಮಾರಿ ಸಿಂಚನಾ ಏಕಾನ್ ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಮಾಡಿ ಸ್ವಾಗತಿಸಿದರು. ಶ್ರೀಮತೀ ಧನ್ಯಶ್ರೀ ಭಟ್ ವಂದಿಸಿದರು. ನೂರಾರು ಯೋಗ ಬಂಧುಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.