ಯಲ್ಲಾಪುರ: ತಾಲೂಕಿನ ಅಣಲಗಾರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರಿಂದ ಚಿತ್ರಸೇನ ಕಾಳಗ ಹಾಗೂ ಭೀಷ್ಮೋತ್ಪತ್ತಿ ಯಕ್ಷಗಾನ ಪ್ರದರ್ಶನ ಜು.8 ರಂದು ರಾತ್ರಿ 7.30 ಕ್ಕೆ ನಡೆಯಲಿದೆ.
ಹಿಮ್ಮೇಳದಲ್ಲಿ ರಾಘವೇಂದ್ರ ಆಚಾರಿ ಜನ್ಸಾಲೆ, ಅನಂತ ಹೆಗಡೆ ದಂತಳಿಗೆ, ಮದ್ದಲೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ, ಶಶಾಂಕ ಆಚಾರಿ, ಚಂಡೆವಾದಕರಾಗಿ ಪ್ರಜ್ವಲ್ ಮುಂಡಾಡಿ ಭಾಗವಹಿಸಲಿದ್ದಾರೆ.
ಭಾಸ್ಕರ ಗಾಂವ್ಕರ ಬಿದ್ರೆಮನೆ, ಗಣಪತಿ ಭಾಗ್ವತ ಶಿಂಬಳಗಾರ, ಶ್ರೀಧರ ಹೆಗಡೆ ಚಪ್ಪರಮನೆ, ಸದಾಶಿವ ಮಲವಳ್ಳಿ, ವಿನಾಯಕ ಭಟ್ಟ ಶೇಡಿಮನೆ, ಕಾರ್ತೀಕ ಚಿಟ್ಟಾಣಿ, ನಾಗರಾಜ ಭಟ್ಟ ಕುಂಕಿಪಾಲ, ವಿನಯ ಬೇರೊಳ್ಳಿ, ಪ್ರವೀಣ ತಟ್ಟೀಸರ, ವೆಂಕಟರಮಣ ಭಾಗ್ವತ ಕವಾಳೆ, ಸತೀಶ ಯಲ್ಲಾಪುರ, ದೀಪಕ ಭಟ್ಟ ಕುಂಕಿ, ಶ್ರೀಧರ ಅಣಲಗಾರ, ರಾಮಕೃಷ್ಣ ಭಟ್ಟ ಕಂಚನಗದ್ದೆ, ವೆಂಕಟರಮಣ ಕವಡಿಕೆರೆ ಪಾತ್ರ ನಿರ್ವಹಿಸಲಿದ್ದಾರೆ.