ಯಲ್ಲಾಪುರದ ಅಡಕೆ ಭವನದಲ್ಲಿ ಅಡಕೆ ವ್ಯವಹಾರಸ್ಥರ ಸಂಘದ ವಾರ್ಷಿಕೋತ್ಸವ ನಡೆಯಿತು.
ಹಿರಿಯ ವರ್ತಕರಾದ ಡಿ.ಶಂಕರ ಭಟ್ಟ, ಎಸ್.ಎನ್.ಭಟ್ಟ ಏಕಾನ, ಉಮೇಶ ಭಟ್ಟ, ಮಧುಕೇಶ್ವರ ಭಟ್ಟ, ಸುಬ್ರಾಯ ಭಟ್ಟ ಬಗನಗದ್ದೆ, ಮುರಳಿ ಹೆಗಡೆ ಅವರನ್ನು ಸನ್ಮಾನಿಸಲಾಯಿತು.
ಅಡಕೆ ವ್ಯವಹಾರಸ್ಥರ ಮಕ್ಕಳಾದ ಶ್ರೀನಿಧಿ ಭಟ್ಟ, ಗಣೇಶ ಭಟ್ಟ, ಉತ್ಸವ ಹೆಗಡೆ, ಕಿರಣ ಭಟ್ಟ, ದೀಕ್ಷಾ ಭಟ್ಟ, ಡಾ.ಐಶ್ವರ್ಯಾ ಭಟ್ಟ, ಸೌಂದರ್ಯಾ ಭಟ್ಟ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಶಿವರಾ ಹೆಬ್ಬಾರ, ಅಡಕೆ ವ್ಯವಹಾರದಲ್ಲಿ ಹಿರಿಯ ವರ್ತಕರ ಆದರ್ಶಗಳನ್ನು ಯುವ ವರ್ತಕರು ಅನುಸರಿಸಬೇಕು. ವ್ಯವಹಾರದಲ್ಲಿ ಎತ್ತರಕ್ಕೆ ಬೆಳೆಯಲು ಅದು ಸಹಕಾರಿಯಾಗುತ್ತದೆ. ಪ್ರತಿಭಾವಂತರನ್ನು ಗುರುತಿಸಿ, ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯ. ಅದನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದರು.
ಸಂಘದ ಅಧ್ಯಕ್ಷ ರವಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಗಡೆ, ಎಂ.ಎನ್.ಭಟ್ಟ ಕವಾಳೆ, ಅಡಕೆ ವರ್ತಕರಾದ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಗೋಪಾಲಕೃಷ್ಣ ಗಾಂವ್ಕರ ಇದ್ದರು. ಟಿ.ಆರ್.ಹೆಗಡೆ, ಮಾರುತಿ ಘಟ್ಟಿ ನಿರ್ವಹಿಸಿದರು.