ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವಿಜ್ಞಾನ ಸಂಪ್ರತಿಷ್ಠಾನ, ಸಾತ್ವಿಕ ಫೌಂಡೇಶನ್ ಹಾಗೂ ಮಂಚೀಕೇರಿ ವಲಯ ಅರಣ್ಯ ಇಲಾಖೆ ಸಂಯುಕ್ತವಾಗಿ ಜು.14 ರಂದು ಸಂಜೆ 5 ಕ್ಕೆ ಸುಮೇರು ಜ್ಯೋತಿರ್ವನದಲ್ಲಿ ‘ಅಕ್ಷರಕ್ಕೊಂದು ವೃಕ್ಷ ಬೆಳೆಸೋಣ ಬನ್ನಿ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ.ಪಿ ವೃಕ್ಷಾರೋಪಣ ನೆರವೇರಿಸುವರು. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಡಿ.ಬಿರಾದಾರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಶೇಷ ತಜ್ಞರಾದ ಶಿವಾನಂದ ಕಳವೆ, ಡಾ.ಕೇಶವ ಹೆಗಡೆ ಕೊರ್ಸೆ, ಪ್ರಕಾಶ ಭಟ್ಟ, ಪ್ರಕಾಶ ಮಂಚಾಲೆ, ಉಮಾಪತಿ ಭಟ್ಟ ಶಿರಸಿ ಭಾಗವಹಿಸುವರು.
ಡಾ.ಕೆ.ಸಿ. ನಾಗೇಶ ಭಟ್ಟರ ಪರಿಕಲ್ಪನೆ ಮತ್ತು ಸ್ವರೂಪ ಸಂಯೋಜನೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. “ಪ್ರಪಂಚಸಾರ” ಗ್ರಂಥದ ಆಧಾರದಂತೆ ಭಾರತೀಯ ಶಾಸ್ತ್ರೀಯ ಪರಂಪರೆಯಲ್ಲಿ ಉಲ್ಲೇಖಿಸಲ್ಪಟ್ಟ ರೀತಿಯಲ್ಲಿ ವೃಕ್ಷಾರೋಪಣವನ್ನು ಜ್ಯೋತಿಷಾಚಾರ್ಯ ನಾಗೇಂದ್ರ ಭಟ್ಟ ಹಿತ್ಲಳ್ಳಿ ಅವರ ಮಾರ್ಗದರ್ಶನದಲ್ಲಿ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷೆ ಡಾ.ನಿವೇದಿತಾ ಭಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.