ಯಲ್ಲಾಪುರ: ಗಾಯನಾಚಾರ್ಯ ದಿ.ಪಂಡಿತ ಸಂದೀಪ ಉಡುಪ ಇವರ ಸ್ಮರಣಾರ್ಥ ತಟಗಾರಿನ ಜೋಡಳ್ಳದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಗುರುವಂದನೆ ಮತ್ತು ನಾದಪೂರ್ಣಿಮಾ ಸಂಗೀತ ಕಾರ್ಯಕ್ರಮ ನಡೆಯಿತು.
ಸ್ವರಮಾಧುರಿ ಸಂಗೀತ ವಿದ್ಯಾಲಯದ ಗುರುಗಳಾದ ವಿ.ವಾಣಿ ಹೆಗಡೆ, ವಿ.ಗಣಪತಿ ಹೆಗಡೆ ಮತ್ತು ಗಣೇಶ ಹೆಗಡೆ ನೆರ್ಲೇಮನೆ, ಮಹೇಶ ಮಹಾಲೆ, ಸುದಾಮ ದಾನಗೇರಿ ಇವರಿಂದ ಸಂಗೀತ ರಸದೌತಣ ದೊರೆಯಿತು. ಸತೀಶ ಭಟ್ಟ ಹೆಗ್ಗಾರ, ಸುದೇಶ ಭಟ್ಟ ಮಣ್ಮನೆ ಹಾರ್ಮೋನಿಯಂ ಸೋಲೋದಲ್ಲಿ ಪ್ರತಿಭೆ ಪ್ರದರ್ಶಿಸಿದರು.
ಸಂಸ್ಥೆಯ ವಿದ್ಯಾರ್ಥಿಗಳಾದ ವಿಭಾ ಹೆಗಡೆ, ಕೌಸ್ತುಭ ಭಟ್ಟ, ಚಿನ್ಮಯ ಭಟ್ಟ, ಶೃತಿ ಭಟ್ಟ ಹಿಟ್ಟಿನಬೈಲ, ಆಯುಷ್ ಹೆಗಡೆ, ಪ್ರಭಾತ ಭಟ್ಟ, ಸಾನ್ವಿ ಇನಾಮದಾರ, ಆಶಿಕಾ ಭಟ್ಟ ಗಾಯನಕ್ಕೆ ತಬಲಾದಲ್ಲಿ ಪ್ರದೀಪ ಕೋಟೇಮನೆ, ನಾರಾಯಣ ಭಟ್ಟ ಹಿಟ್ಟಿನಬೈಲ, ನಾಗೇಂದ್ರ ವೈದ್ಯ, ವಿಶೇಷ ಕಲಾವಿದರಾದ ಮಧು ಕುಡಾಲ್ಕರ್, ಗಣೇಶ ಭಾಗ್ವತ ಗುಂಡ್ಕಲ್ ತಬಲಾ ಸಾಥ್ ನೀಡಿದರು. ಹಾರ್ಮೋನಿಯಂನಲ್ಲಿ ಸತೀಶ ಭಟ್ಟ, ಪ್ರಭಾತ ಭಟ್ಟ, ಸುದೇಶ ಭಟ್ಟ ಸಾಥ್ ನೀಡಿದರು.
ಆರ್.ಎಸ್.ಭಾಗ್ವತ ಶಿಗೇಪಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದೇವಸ್ಥಾನದ ಅಧ್ಯಕ್ಷ ಗೋಪಾಲಕೃಷ್ಣ ಹಂಗಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ನರಸಿಂಹ ಬೋಳ್ಪಾಲ, ಮಂಜುನಾಥ ಕೊಂಬೆಪಾಲ, ನಾಗಪತಿ ಭಟ್ಟ, ರಮೇಶ ಹೆಗಡೆ, ವಾಣಿ ಹೆಗಡೆ, ಗಣಪತಿ ಹೆಗಡೆ ಉಪಸ್ಥಿತರಿದ್ದರು.
ಸುದಾಮ ದಾನಗೇರಿ ಸ್ವಾಗತಿಸಿದರು. ಶ್ರೀಧರ ಹೆಗಡೆ ಮಾಳಕೊಪ್ಪ ನಿರ್ವಹಿಸಿದರು. ಗಣೇಶ ಹೆಗಡೆ ನೆರ್ಲೆಮನೆ ವಂದಿಸಿದರು.