ಕಾಂಬೋಡಿಯಾದಲ್ಲಿ ನಡೆಯಲಿರುವ 16ನೇ ಏಷ್ಯನ್ ಅಂತರ-ಸಂಸದೀಯ ಸಭೆ(Asian Inter-Parliamentary Assembly-AIPA) ಯಲ್ಲಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕಾಗೇರಿ ಭಾರತದ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದು, ಜುಲೈ 14 ರಿಂದ 17ರವರೆಗೆ ನಡೆಯಲಿರುವ ಈ ಸಭೆಯಲ್ಲಿ ದೇಶದ ನಿಲುವು, ಯೋಜನೆ ಮತ್ತು ವಿಷಯಗಳನ್ನು ಕಾಗೇರಿ ಮಂಡಿಸಲಿದ್ದಾರೆ.
ಈ ವರ್ಷದ ಪ್ರಮುಖ ವಿಷಯವಾದ “ಸಂವಾದದ ಮೂಲಕ ಶಾಂತಿ ಮತ್ತು ಮುಂದಿನ ಸಂಸದೀಯ ಹಾದಿ ಹಾಗೂ ಮಹಿಳೆಯರ ಸಶಕ್ತಿಕರಣ, ಹವಾಮಾನ ವೈಪರಿತ್ಯ” ಮತ್ತು ಇನ್ನಿತರ ವಿಷಯಗಳ ಕುರಿತಂತೆ ಈ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಸಂವಾದ ನಡೆಯಲಿದೆ.
ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಷ್ಟ್ರದ ಅಭಿವೃದ್ಧಿ ಮತ್ತು ವಿಶ್ವದ ಎಲ್ಲೆಡೆ ಅವರು ಕೈಗೊಂಡಿರುವ ಸಾಧನೆಯನ್ನೂ ಸಭೆಯಲ್ಲಿ ಕಾಗೇರಿ ಪ್ರಸ್ತಾಪಿಸಲಿದ್ದಾರೆ.