ಯಲ್ಲಾಪುರ: ಪಟ್ಟಣ ವ್ಯಾಪ್ತಿಯ ರಾಮಾಪುರದಲ್ಲಿ ಮಳೆಯ ರಭಸದಿಂದಾಗಿ ರಸ್ತೆ ಕುಸಿದು ಹೋಗಿದೆ. ಸ್ಥಳೀಯರು ಓಡಾಟಕ್ಕೆ ಹರಸಾಹಸಪಡುವ ಸ್ಥಿತಿ ಬಂದೊದಗಿದೆ.
ರಾಮಾಪುರದಲ್ಲಿ ಗದ್ದೆಗಳ ನಡುವೆ ಹಾದು ಹೋದ ಈ ಕಾಲುದಾರಿಗೆ ಕಾಂಕ್ರೀಟ್ ಹಾಕಿ ಓಡಾಡಲು ಅನುಕೂಲ ಮಾಡಿಕೊಡಲಾಗಿತ್ತು. ಕಳೆದ ವಾರದ ಮಳೆಯ ಅಬ್ಬರಕ್ಕೆ ಕಾಂಕ್ರೀಟ್ ಕುಸಿದು ಓಡಾಡಲು ಕಷ್ಟವಾಗಿದೆ.
ಪ್ರತಿನಿತ್ಯ ಈ ಭಾಗದ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಶಾಲೆ, ಕಾಲೇಜಿಗೆ ಹೋಗಬೇಕಾಗಿದೆ. ಸ್ಥಳೀಯರ ತಿರುಗಾಟಕ್ಕೂ ಇದೇ ರಸ್ತೆ ಬಳಕೆಯಾಗುತ್ತದೆ. ಆದರೆ ಇದೀಗ ರಸ್ತೆಯ ದುಸ್ಥಿತಿಯಿಂದಾಗಿ ಸಮಸ್ಯೆ ಉಂಟಾಗಿದೆ.
ಸ್ಥಳೀಯ ಆಡಳಿತ ಈ ಬಗೆಗೆ ತುರ್ತಾಗಿ ಗಮನ ಹರಿಸಿ, ರಸ್ತೆಯನ್ನು ಸರಿಪಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಿಕೊಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.