ಯಲ್ಲಾಪುರ: 12 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗುಜರಾತಿನಲ್ಲಿ ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಗುಜರಾತ ರಾಜ್ಯದ ದಾಹೋಡ್ ನ ಮಹಮ್ಮದ್ ರಫೀಕ್ ಬಬ್ಬನ್ ಖಾನ್ ಮೇವಾದಿ ಬಂಧಿತ ವ್ಯಕ್ತಿ. ಪ್ರಕರಣವೊಂದರ ಆರೋಪಿಯಾಗಿರುವ ಈತ ಕಳೆದ 12 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ.
ಈತನನ್ನು ಗುಜರಾತಿನ ದಾಹೋಡ್ ನಲ್ಲಿ ಯಲ್ಲಾಪುರ ಪಿಎಸ್ಐ ಸಿದ್ದಪ್ಪ ಗುಡಿ, ಸಿಬ್ಬಂದಿ ಮಹಮ್ಮದ್ ಶಫಿ, ಗಿರೀಶ ಲಮಾಣಿ ಹಾಗೂ ಪರಶುರಾಮ ದೊಡ್ಡಮನಿ ಅವರ ತಂಡ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದೆ.