ಕುಮಟಾ ತಾಲೂಕಿನ ಬಗ್ಗೋಣ ಇಪ್ಪಡಿಯ ವ್ಯಕ್ತಿಯೊಬ್ಬ ಕಾಣೆಯಾದ ಬಗ್ಗೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಶ್ವರ ನಾಗು ಮುಕ್ರಿ ಕಾಣೆಯಾದ ವ್ಯಕ್ತಿ. ಈತನ ಹೆಂಡತಿ ಕಳೆದ 8 ವರ್ಷಗಳ ಹಿಂದೆ ಮಕ್ಕಳೊಂದಿಗೆ ಮನೆ ಬಿಟ್ಟು ತನ್ನ ತವರು ಮನೆಗೆ ಹೋಗಿದ್ದು, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಮಾನಸಿಕವಾಗಿ ನೊಂದುಕೊಂಡಿದ್ದ. ಕಳೆದ ಜೂನ್ 15 ರಂದು ಮನೆಯಿಂದ ಹೊರಗಡೆ ಹೋದವನು ಮರಳಿ ಬಾರದೇ ಕಾಣೆಯಾಗಿದ್ದಾನೆ.
ಗೋಧಿ ಮೈ ಬಣ್ಣ, ಸಾಧಾರಣ ಮೈ ಕಟ್ಟು, 5.6 ಅಡಿ ಎತ್ತರ, ಟಿ-ಶರ್ಟ್, ಕಪ್ಪು ಬಣ್ಣದ ಹಾಪ್ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಾನೆ. ಈತ ಯಾರಿಗಾದರೂ ಕಂಡು ಬಂದಲ್ಲಿ ಕುಮಟಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ:08386-222333, 9480805272 ಗೆ ಮಾಹಿತಿ ನೀಡುವಂತೆ ಪೊಲೀಸರು ವಿನಂತಿಸಿದ್ದಾರೆ.