ಅಂಕೋಲಾ: ತಾಲೂಕಿನ ಹೆಗ್ಗಾರಿನ ಮನೆಯೊಂದರಲ್ಲಿ ಅವಿತಿದ್ದ ಕಾಳಿಂಗ ಸರ್ಪವನ್ನು ಅರಬೈಲಿನ ಸೂರಜ್ ಶೆಟ್ಟಿ ರಕ್ಷಿಸಿ, ಕಾಡಿಗೆ ಬಿಟ್ಟರು.
ಹೆಗ್ಗಾರಿನ ಕೃಷ್ಣ ಪಟಗಾರ ಅವರ ಅಡುಗೆ ಮನೆಯ ಗ್ಯಾಸ್ ಸಿಲೆಂಡರ್ ಬಳಿ ಕಾಳಿಂಗ ಸರ್ಪ ಅವಿತಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗಪ್ರೇಮಿ ಸೂರಜ್ ಶೆಟ್ಟಿ, ಸುಮಾರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ ಕಾಡಿಗೆ ಬಿಟ್ಟರು. ಅರಣ್ಯ ರಕ್ಷಕ ಹಜರತ್ ಅಲಿ, ಹರೀಶ ಮಡಿವಾಳ,ಚಂದ್ರಕಾಂತ ನಾಯ್ಕ ಸಹಕರಿಸಿದರು.