ಯಲ್ಲಾಪುರ: ತಾಲೂಕಿನ ಸವಣಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣವಾಗುತ್ತಿರುವ ವಿವೇಕ ಶಾಲಾ ಕೊಠಡಿಯ ಕಾಮಗಾರಿಯನ್ನು ಶಿರಸಿ ಪಂಚಾಯತ ರಾಜ್ ಇಂಜಿನೀಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಇಂಜೀನಿಯರ್ ಸತೀಶ ಜಾಗಿರದಾರ ಪರಿಶೀಲಿಸಿದರು.
ಕೊಠಡಿಯ ನಿರ್ಮಾಣದ ಕುರಿತಂತೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಯಲ್ಲಾಪುರ ಉಪವಿಭಾಗದ ಪಂಚಾಯತರಾಜ್ ಇಂಜಿನಿಯರ್ ವಿಭಾಗದ ಎಇಇ ಅಶೋಕ ಬಂಟ್, ಇಂಜನಿಯರ್ ಮೀನಾಕ್ಷಿ, ಮುಖ್ಯಾಧ್ಯಾಪಕ ಸಂಜೀವಕುಮಾರ ಹೊಸ್ಕೇರಿ ಇದ್ದರು.