ಯಲ್ಲಾಪುರ: ತಾಲೂಕಿನ ಮಾಗೋಡ ಬಸ್ ಪದೇ ಪದೇ ಕೆಟ್ಟು ನಿಲ್ಲುತ್ತಿದ್ದು, ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಶಕ್ತಿ ಯೋಜನೆಯಿಂದಾಗಿ ಬಸ್ ವ್ಯವಸ್ಥೆ ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತಿರುವುದಕ್ಕೆ ಇದು ಉದಾಹರಣೆಯಾಗಿದೆ.
ಶನಿವಾರ ಬೆಳಗ್ಗೆ ಮಾಗೋಡಿನ ಕಾರಕುಂಕಿ ತಿರುವಿನ ಬಳಿ ರಸ್ತೆ ಮಧ್ಯೆ ಬಸ್ ಕೆಟ್ಟು ನಿಂತಿದ್ದು, ಬೇರೆ ವಾಹನಗಳ ಓಡಾಟಕ್ಕೆ ಸಮಸ್ಯೆಯಾಯಿತು. ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು, ಬಸ್ ಕೆಟ್ಟು ನಿಂತಿದ್ದರಿಂದ ಸಮಯಕ್ಕೆ ಸರಿಯಾಗಿ ತಲುಪಲಾಗದೇ ತೊಂದರೆಯಾಯಿತು.
ಶನಿವಾರವಾಗಿರುವುದರಿಂದ ಮಾಗೋಡ ಜಲಪಾತ, ಜೇನುಕಲ್ಲುಗುಡ್ಡ ವೀಕ್ಷಣೆಗೆ ಹೊರ ಊರುಗಳಿಂದ ಬರುವ ನೂರಾರು ಪ್ರವಾಸಿಗರು ಮುಂದೆ ಹೋಗಲು ಸಾಧ್ಯವಾಗಲಿಲ್ಲ.
ಎರಡು ದಿನಗಳ ಹಿಂದೆ ಮಾಗೋಡ ಕಾಲೋನಿ ಬಳಿ ಬಸ್ ಕೆಟ್ಟು ನಿಂತಿತ್ತು. ಹೀಗಿ ಪ್ರತಿನಿತ್ಯ ಸಮಸ್ಯೆಯಾಗುತ್ತಿದ್ದು, ಬಸ್ ನ್ನೇ ನಂಬಿ ಓಡಾಡುವ ಪ್ರಯಾಣಿಕರು, ವಿದ್ಯಾರ್ಥಿಗಳ ಬವಣೆಯನ್ನು ಕೇಳುವವರಿಲ್ಲದಂತಾಗಿದೆ.