ಯಲ್ಲಾಪುರ: ತಾಲೂಕಿನ ಚಂದಗುಳಿ ಘಂಟೆ ಗಣಪತಿ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ತುರುವೆಕೆರೆಯ ಶ್ರೀಪ್ರಣವಾನಂದ ತೀರ್ಥ ಸ್ವಾಮಿಗಳ ಸಮ್ಮುಖದಲ್ಲಿ ಸ್ಥಳೀಯ ಕಲಾವಿದರಿಂದ ಗಾನ ನಾದ ಸೇವೆ ನಡೆಯಿತು.
ಭಾಗವತರಾದ ದಿನೇಶ ಭಟ್ಟ ಯಲ್ಲಾಪುರ, ನಾಗೇಂದ್ರ ಭಾಗ್ವತ ಶೇಡಿಜಡ್ಡಿ ವಿವಿಧ ಯಕ್ಷಗಾನ ಪದ್ಯಗಳು ಹಾಗೂ ದೇವರ ಸ್ತುತಿಗಳನ್ನು ಪ್ರಸ್ತುತಪಡಿಸಿದರು. ವಿಶ್ವೇಶ್ವರ ಹೆಬ್ಬಾರ ಹಾಲೆಪಾಲ ಹಾಗೂ ನರಸಿಂಹ ಭಟ್ಟ ಹಂಡ್ರಮನೆ ಮದ್ದಲೆವಾದಕರಾಗಿ ಸಹಕರಿಸಿದರು.
ಶ್ರೀಗಳು ಕಲಾವಿದರಿಗೆ ಶಾಲು ಹೊದೆಸಿ ಆಶೀರ್ವದಿಸಿದರು.