ಯಲ್ಲಾಪುರ ತಾಲೂಕಿನ ಕಳಚೆಯಲ್ಲಿ ಮತ್ತೊಮ್ಮೆ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ.
ಕಳಚೆಯ ಹೊಸಕುಂಬ್ರಿಯ ರಾಮಚಂದ್ರ ಭಟ್ಟ ಅವರ ಮನೆಯ ಹಿಂಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ.
ಕಳೆದ ತಿಂಗಳು ಮಳೆ ಜೋರಾಗಿದ್ದ ಸಂದರ್ಭದಲ್ಲಿ ರಸ್ತೆಯ ಮೇಲೆ ಸಣ್ಣ ಪ್ರಮಾಣದಲ್ಲಿ ಧರೆಯ ಮಣ್ಣು ಕುಸಿದಿತ್ತು.
ನಾಲ್ಕು ವರ್ಷಗಳ ಹಿಂದೆ ಕಳಚೆಯಲ್ಲಿ ಉಂಟಾಗಿದ್ದ ಭಾರಿ ಪ್ರಮಾಣದ ಭೂಕುಸಿತ ಘಟನೆಯ ನೆನಪು ಇನ್ನೂ ಮಾಸದೇ ಇರುವ ಕಾರಣ, ಕಳಚೆಯಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾದರೂ ಸಹಜವಾಗಿ ಆತಂಕ ಸೃಷ್ಟಿಯಾಗುತ್ತದೆ.