ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವಾರದಲ್ಲಿ ಚೆಸ್ ಪಾರ್ಕ್ ನಿರ್ಮಿಸಲಾಗಿದೆ.
ಚೆಸ್ ಆಟದ ಮಹತ್ವ ಸಾರುವ ಈ ವಿಶೇಷ ಪಾರ್ಕನ್ನು ಶಾಸಕ ಶಿವರಾಮ ಹೆಬ್ಬಾರ ಶುಕ್ರವಾರ ಉದ್ಘಾಟಿಸಿದರು. ಚೆಸ್ ಏಕಾಗ್ರತೆ, ಬುದ್ದಿಮತ್ತೆ, ಕೌಶಲ್ಯವನ್ನು ವೃದ್ಧಿಸುವ ಆಟವಾಗಿದ್ದು, ವಿದ್ಯಾರ್ಥಿ ದೆಸೆಯಲ್ಲೇ ಚೆಸ್ ಆಡುವ ಮೂಲಕ ನೈಪುಣ್ಯತೆಯನ್ನು ಗಳಿಸಿಕೊಳ್ಳಬೇಕು. ಚೆಸ್ ಪಾರ್ಕನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗ್ರಾಮ ಪಂಚಾಯತ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ತಾ ಪಂ ಇಒ ರಾಜೇಶ ಧನವಾಡಕರ್, ಜಿಪಂ ಎಇಇ ಅಶೋಕ ಬಂಟ, ಬಿಇಒ ಎನ್ ಆರ್ ಹೆಗಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಎಸ್ ಭಟ್ಟ, ಗ್ರಾಪಂ ಸದಸ್ಯರಾದ ಗ ರಾ ಭಟ್ಟ, ಖೈತಾನ್ ಡಿಸೋಜಾ, ಪಿಡಿಒ ನಸ್ರೀನ್ ಎಕ್ಕುಂಡಿ, ಕಾರ್ಯದರ್ಶಿ ಮೋಹನ, ಸಿ ಆರ್ ಪಿ ವಿಷ್ಣು ಭಟ್ಟ, ಶಿಕ್ಷಕಿ ಜ್ಯೋತಿ ಇತರರು ಭಾಗವಹಿಸಿದ್ದರು.