ಯಲ್ಲಾಪುರದ ಟಿಳಕ್ ಚೌಕ್ ಭಾಗದ 3-4 ಮನೆಗಳಲ್ಲಿ ಕಳ್ಳತನ ನಡೆದಿದೆ.
ಟಿಳಕ ಚೌಕ ಸುತ್ತಮುತ್ತಲಿನ ಪ್ರಸನ್ನಗುಡಿಗಾರ, ಕೈಸರೆ, ಹಿರೇಮಠ ಮನೆಗಳೂ ಸೇರಿದಂತೆ ನಾಲ್ಕು ಮನೆಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಹಣ, ಸಣ್ಣಪುಟ್ಟ ಸಾಮಗ್ರಿಗಳನ್ನು ಹೊತ್ತೊಯ್ದಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.