ಯಲ್ಲಾಪುರ: ರಾಷ್ಟ್ರಕ್ಷೇಮದ ಸಂಕಲ್ಪದೊಂದಿಗೆ ಧಾರ್ಮಿಕ ಅನುಷ್ಠಾನ ನಡೆಸುತ್ತಿರುವ ‘ಆಯುಷ್ಮಾನ್ ಭವ ವಿಜಯೀಭವ’ ಬಳಗದ 324 ನೇ ಅನುಷ್ಠಾನ ನಂದೊಳ್ಳಿ ಬೆಳಖಂಡದಲ್ಲಿ ನಡೆಯಿತು.
ಪ್ರಭಾ ಪ್ರಕಾಶ ಭಾಗ್ವತ ಅವರ ಮನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಾಯತ್ರಿ ಹವನ, ಮಹಾಗಣಪತಿ ಮೂಲಮಂತ್ರ ಹವನ, ರಾಮತಾರಕ ಜಪಾನುಷ್ಠಾನಗಳು ನೆರವೇರಿದವು.
ಮಂಜುನಾಥ ಭಟ್ಟ ಭಟ್ರಕೇರಿ ನೇತೃತ್ವದ 12 ವೈದಿಕರ ಮಾರ್ಗದರ್ಶನದಲ್ಲಿ ಪ್ರದೀಪ ಭಾಗ್ವತ ಕಾರ್ಯಕ್ರಮ ನೆರವೇರಿಸಿದರು. ಭಾರತಮಾತ್ರಷ್ಟಕಮ್ ಸ್ತೋತ್ರ ಪಠಣದೊಂದಿಗೆ ಅನುಷ್ಠಾನ ಸಂಪನ್ನಗೊಂಡಿತು.