ಯಲ್ಲಾಪುರ: ತಾಲೂಕಿನ ಚಂದಗುಳಿಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ತುರುವೆಕೆರೆಯ ಶ್ರೀ ಪ್ರಣವಾನಂದ ತೀರ್ಥ ಸ್ವಾಮಿಗಳ ಚಾತುರ್ಮಾಸ್ಯ ವ್ರತದ ಪ್ರಯುಕ್ತ ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ ಇವರಿಂದ ಜು.25 ರಂದು ಸಂಜೆ 4.30 ಕ್ಕೆ ತಾಳಮದ್ದಲೆ ನಡೆಯಲಿದೆ.
ಅಮೃತ ಸೋಮೇಶ್ವರ ವಿರಚಿತ ಗಂಗಾವತರಣ ಪ್ರಸಂಗವನ್ನು ಕರ್ನಾಟಕ ಕಲಾ ಸನ್ನಿಧಿ ಹಾಗೂ ಅತಿಥಿ ಕಲಾವಿದರು ಶ್ರೀಗಳ ಸಮ್ಮುಖದಲ್ಲಿ ಪ್ರಸ್ತುತಪಡಿಸಲಿದ್ದಾರೆ.
ಹಿಮ್ಮೇಳದಲ್ಲಿ ಭಾಗವತರಾಗಿ ದಿನೇಶ ಭಟ್ಟ ಯಲ್ಲಾಪುರ, ಮದ್ದಲೆವಾದಕರಾಗಿ ವಿಶ್ವೇಶ್ವರ ಹೆಬ್ಬಾರ ಹಾಲೆಪಾಲ ಭಾಗವಹಿಸುವರು. ಅರ್ಥಧಾರಿಗಳಾಗಿ ನರಸಿಂಹ ಭಟ್ಟ ಕುಂಕಿಮನೆ, ನಿರಂಜನ ಜಾಗನಳ್ಳಿ, ಶ್ರೀಧರ ಅಣಲಗಾರ, ದೀಪಕ ಭಟ್ಟ ಕುಂಕಿ ಭಾಗವಹಿಸಲಿದ್ದಾರೆ.





