ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯವು ಪ್ರಥಮ ಸೆಮಿಸ್ಟರ್ ಬಿ.ಇಡಿ. ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ದಾಖಲಿಸಿದೆ.
ರಾಗಾ ರವೀಶ ಹೆಗಡೆ ಶೇ.92.58 ಅಂಕಗಳೊಂದಿಗೆ ಪ್ರಥಮ. ಶ್ವೇತಾ ಅಪ್ಪಯ್ಯ ಮಠದ ಮತ್ತು ಸಂಧ್ಯಾ ಮಂಜುನಾಥ ಮಡಿವಾಳ ಶೇ.91.66 ಅಂಕಗಳೊಂದಿಗೆ ದ್ವಿತೀಯ, ಸೈಮನ್ ಫರ್ನಾಂಡೀಸ್ ಮತ್ತು ಮನುಷಾ ಭೀಮಪ್ಪ ಬಡಸ್ ಶೇ.91 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.





