ಯಲ್ಲಾಪುರ ತಾಲೂಕಿನ ಉಮ್ಮಚಗಿಯಲ್ಲಿ ಶಿಕ್ಷಕಿಯೊಬ್ಬರ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂ.ಮೌಲ್ಯದ ಬಂಗಾರದ ಆಭರಣ ಹಾಗೂ ನಗದು ಕಳ್ಳತನ ಮಾಡಿದ್ದಾರೆ.
ಉಮ್ಮಚಗಿಯ ವಿದ್ಯಾರಣ್ಯ ಬಡಾವಣೆಯ ಶಿಕ್ಷಕಿ ಜಯಶ್ರೀ ಸೀತಾರಾಮ ಗಾಂವ್ಕರ ಶಾಲೆಗೆ ಹೋದ ಸಂದರ್ಭ ಸಾಧಿಸಿ, ಅವರ ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು, 5.03 ಲಕ್ಷ ರೂ ಮೌಲ್ಯದ ಆಭರಣ ಹಾಗೂ 1 ಲಕ್ಷ ರೂ ಹಣವನ್ನು ಕದ್ದೊಯ್ದಿದ್ದಾರೆ.
ಯಲ್ಲಾಪು ಠಾಣೆಯ ಪಿಎಸ್‌ಐ ಮಹಾವೀರ ಕಾಂಬಳೆ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಪಿಐ ರಮೇಶ ಹನಾಪುರ, ಪಿಎಸ್‌ಐಗಳಾದ ಯಲ್ಲಾಲಿಂಗ ಕುನ್ನುರ, ಶೇಡಜಿ ಚವ್ಹಾಣ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಕಾರವಾರದ ಶ್ವಾನದಳ ಹಾಗೂ ಬೆರಳಚ್ಚು ತಂಡದವರು ಪರಿಶೀಲಿಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.