ಯಲ್ಲಾಪುರ ತಾಲೂಕಿನ ಬಾಗಿನಕಟ್ಟಾದಲ್ಲಿ ಜೋರಾದ ಗಾಳಿಯ ಪರಿಣಾಮ ಮರದ ಟೊಂಗೆ ಮೈಮೇಲೆ ಬಿದ್ದು ವ್ಯಕ್ತಿಯೊಬ್ಬರ ಕೈ ಮೂಳೆ ಮುರಿದಿದೆ.
ಬಾಗಿನಕಟ್ಟಾದ ಪರಶುರಾಮ ನಾರಾಯಣ ದೇವಳಿ ಗಾಯಗೊಂಡವರು. ಮರದ ಟೊಂಗೆ ಮೈಮೇಲೆ ಬಿದ್ದು ಅವರ ಭುಜದ ಕೀಲು ಪಲ್ಲಟವಾಗಿದೆ, ಬಲಗೈ ಮೂಳೆ ಮುರಿದಿದೆ.
ತಕ್ಷಣ ಅವರನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಕಾರವಾರ ವೈದ್ಯಕೀಯ ವಿಜ್ಞಾನ ಕೇಂದ್ರಕ್ಕೆ ದಾಖಲಿಸಲಾಗಿದೆ.