ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯಲ್ಲಾಪುರ ತಾಲೂಕಿನ ಅಲ್ಕೇರಿಗೌಳಿವಾಡ ಗ್ರಾಮದ ಯುವಕ ಬಮ್ಮು ಬಾಬು ಜಾನಕರ್ ಅವರನ್ನು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ ಮಿರಾಶಿ ಅವರು ಶಾಲು ಹೊದಿಸಿ, ಗೌರವಿಸಿದರು.
ಪ್ರಸ್ತುತ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಬಮ್ಮು ಅವರ ಕಾರ್ಯ, ಇತರ ಯುವಕರಿಗೂ ಮಾದರಿಯಾಗಲಿ ಎಂದು ಮಿರಾಶಿ ಹಾರೈಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಗಣೇಶ ಹೆಗಡೆ ಪಣತಗೇರಿ, ಅನಿಕೇತ್ ಮಿರಾಶಿ, ಸೇರಿದಂತೆ ಅಲ್ಕೇರಿಗೌಳಿವಾಡದ ಗ್ರಾಮಸ್ಥರು, ಯುವಕರು ಉಪಸ್ಥಿತರಿದ್ದರು.