ಯಲ್ಲಾಪುರ ತಾಲೂಕಿನಲ್ಲಿ ಮಳೆ-ಗಾಳಿಯಿಂದ ಹಲವೆಡೆ ಅನಾಹುತಗಳು ಸಂಭವಿಸಿವೆ.
ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ಹುಳಸೆಮನೆಯಲ್ಲಿ ಮಹೇಶ ಗಣಪತಿ ಮೊಗೇರ ಎನ್ನುವವರಿಗೆ ಸೇರಿದ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ.
ಮನೆಯವರು ತೋಟದ ಕೆಲಸಕ್ಕೆ ಹೋಗಿದ್ದ ಕಾರಣ ಯಾರಿಗೂ ಅಪಾಯ ಉಂಟಾಗಿಲ್ಲ. ಗ್ರಾ.ಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ಸದಸ್ಯರಾದ ಗ.ರಾ.ಭಟ್ಟ, ಖೈತಾನ್ ಡಿಸೋಜ,ಕಾರ್ಯದರ್ಶಿ ಮೋಹನ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಹಾನಿ ಪರಿಶೀಲಿಸಿದರು.
ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಬೆಳ್ಳಂಬಿಯ ಕೃಷ್ಣ ವಿಠೋಬ ಮರಾಠಿ ಮತ್ತು ಜಕ್ಕೊಳ್ಳಿಯ ಚಂದ್ರಕಾಂತ ಸುಬ್ಬಾ ಸಿದ್ದಿ ಎನ್ನುವವರ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಹಾನಿ ಅಂದಾಜಿಸಿದ್ದಾರೆ.