ಅಕ್ಷರನಾದ ಕಲೆ, ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕರ್ನಾಟಕ ಇವರು ನೀಡುವ ಸ್ಟಾರ್ ಅಚೀವರ್ ಆಫ್ ಕರ್ನಾಟಕ ಪ್ರಶಸ್ತಿಗೆ ಯಲ್ಲಾಪುರ ತಾಲೂಕಿನ ಮಲವಳ್ಳಿಯ ಶೈಲಾ ಭಟ್ಟ ಭಾಜನರಾಗಿದ್ದಾರೆ.
ವರ್ಷದ ಉತ್ತಮ ಬರಹಗಾರರಿಗೆ ನೀಡುವ ಈ ಪ್ರಶಸ್ತಿಯನ್ನು ಬೆಂಗಳೂರಿನ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಶೈಲಾ ಭಟ್ಟ ಅವರಗೆ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಶೈಲಾ ಭಟ್ಟ ಅವರ ‘ಭಾವಾಕ್ಷರಿ’ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಲಾಯಿತು. ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಡಾ.ಶ್ರುತಿ ಮಧುಸೂದನ, ಗಾಯಕ ಶಶಿಧರ ಕೋಟೆ, ನಟ ಶಿವಕುಮಾರ ಆರಾಧ್ಯ ಇತರರು ಭಾಗವಹಿಸಿದ್ದರು.