ಪದೇ ಪದೇ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತ ಬೇಜವಾಬ್ದಾರಿ ತೋರುತ್ತಿರುವ ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ನಾಗರಿಕ ವೇದಿಕೆ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ರಾಮು ನಾಯ್ಕ ಆಗ್ರಹಿಸಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿ, ನೀವು ನಿಜವಾದ ಭಾರತೀಯರೇ? ನಿಜವಾದ ಭಾರತೀಯರಾಗಿದ್ದರೆ, ಈ ರೀತಿ ಮಾತನಾಡುತ್ತಿರಲಿಲ್ಲ”.ರಾಹುಲ್ ಗಾಂಧಿ ಅವರಿಗೆ ದೇಶದ ಸರ್ವೋಚ್ಛ ನ್ಯಾಯಾಲಯ ಹಾಕಿದ ಛೀಮಾರಿಯ ಪರಿ ಇದು. 3 ವರ್ಷಗಳ ಹಿಂದೆ, ಭಾರತ ಚೀನಾ ಸಂಘರ್ಷದ ಸಂದರ್ಭದಲ್ಲಿ ಭಾರತೀಯ ಯೋಧರನ್ನು ಅಪಮಾನಿಸಿ ಸುಪ್ರೀಂಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಬಹುಶಃ ಇಲ್ಲಿಯವರೆಗೆ ಯಾವ ವ್ಯಕ್ತಿಗೂ ಸುಪ್ರೀಂಕೋರ್ಟ್ ಇಷ್ಟು ನಿಕೃಷ್ಟವಾಗಿ ಅವರ ಜನ್ಮ ಕೆದಕಿರಲಿಲ್ಲ.
ರಾಹುಲ ಗಾಂಧಿಗೆ ಕೋರ್ಟ ಛೀಮಾರಿ ಹೊಸದೇನಲ್ಲ. ಕೆಲವೇ ತಿಂಗಳುಗಳ ಹಿಂದೆ, ಸಾವರಕರ ಕುರಿತು ಸುಳ್ಳು ಹೇಳಿಕೆ ನೀಡಿದ್ದ ರಾಗಾಗೆ ಸುಪ್ರೀಂಕೋರ್ಟ್ ಇದೇ ರೀತಿ ಝಾಡಿಸಿತ್ತು. ‘ನಿಮಗೇನಾದರೂ ಇತಿಹಾಸ, ಭೂಗೋಳ ಗೊತ್ತಿದೆಯೇ? ಇನ್ನೊಮ್ಮೆ ಈ ರೀತಿ ವರ್ತಿಸಿದರೆ ಸುಮೋಟೋ ಕೇಸ್ ದಾಖಲಿಸುವುದಾಗಿ ‘ಎಚ್ಚರಿಕೆ ನೀಡಿತ್ತು.
2016 ರಲ್ಲಿಯೂ ‘ ಮಹಾತ್ಮಾ ಗಾಂಧಿ ಹತ್ಯೆಗೆ ಆರ್.ಎಸ್.ಎಸ್.ಕಾರಣ ಎಂದು ಹೇಳಿಕೆ ನೀಡಿದ್ದಾಗಲೂ ಸುಪ್ರೀಂ ತಪರಾಕಿ ಹಾಕಿತ್ತು. ‘ನಿಮ್ಮ ಬೇಜವಾಬ್ದಾರಿ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆ ಕೇಳಿ, ಇಲ್ಲವೇ ಮಾನನಷ್ಟ ಮೊಕದ್ದಮೆ ಎದುರಿಸಿ’ ಎಂದು ವಾರ್ನ್ ಮಾಡಿತ್ತು.
ಹಾಲಿ ವಿರೋಧ ಪಕ್ಷದ ನಾಯಕ, ಭಾವಿ ಪ್ರಧಾನಿಯ ಕನಸು ಕಾಣುತ್ತಿರುವ ರಾಹುಲ್ ಗಾಂಧಿ ತಮ್ಮ ಎಲುಬಿಲ್ಲದ ನಾಲಿಗೆಯಿಂದ ವಿವಾದಗಳ ಗುಡ್ಡೆಯನ್ನೇ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಸರ್ವೋಚ್ಛ ನ್ಯಾಯಾಲಯದ ಇಂದಿನ ತಪರಾಕಿ ಹಿಂದಿನ ಎಲ್ಲ ದಾಖಲೆಗಳನ್ನೂ ಮೀರಿಸಿದೆ. ಅವರು ಒಂದು ಕ್ಷಣವೂ ಸಂಸತ್ತಿನ ವಿರೋಧಪಕ್ಷದ ನಾಯಕನ ಸ್ಥಾನದಲ್ಲಿ ಮುಂದುವರೆಯಬಾರದು ಎಂದು ಒತ್ತಾಯಿಸಿದ್ದಾರೆ.