ಯಲ್ಲಾಪುರ ತಾಲೂಕಿನ ಕಿರವತ್ತಿ ಹೆಸ್ಕಾಂ ಉಪಕೇಂದ್ರದಲ್ಲಿ ತುರ್ತು ಮಾರ್ಗ ನಿರ್ವಹಣೆಯ ಕೆಲಸ ಇರುವುದರಿಂದ ಆಗಸ್ಟ್ 6 ರಂದು ವಿದ್ಯುತ್ ವ್ಯತ್ಯಯವಾಗಲಿದೆ.
ತಾಲೂಕಿನ ಇಡಗುಂದಿ, ಮಾಗೋಡ, ಉಪಳೇಶ್ವರ, ವಜ್ರಳ್ಳಿ, ಗುಳ್ಳಾಪುರ, ಬಿಸಗೋಡ, ಕಣ್ಣಿಗೇರಿ, ಯಲ್ಲಾಪುರ ಪಟ್ಟಣ ಮಾರ್ಗದಲ್ಲಿ ಅಂದು ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.