ಯಲ್ಲಾಪುರದ ಹುಬ್ಬಳ್ಳಿ ರಸ್ತೆಯ ಬಾಳಗಿ ಕಾಂಪ್ಲೆಕ್ಸ್ ಎದುರು ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದು, ವಿದ್ಯುತ್ ಲೈನ್ ಹರಿದು ಬಿದ್ದಿದೆ.
ಮಹಾರಾಷ್ಟ್ರದಿಂದ ಮುರುಡೇಶ್ವರಕ್ಕೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಕಾರಿನಲ್ಲಿದ್ದ ನಾಲ್ಕು ಜನ ಪ್ರಯಾಣಿಕರಿಗೆ ಯಾವುದೇ ಅಪಾಯ ಉಂಟಾಗಿಲ್ಲ. ಭಾರತೀಯ ಸೇನೆಯ ಅಧಿಕಾರಿಯೊಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ವಿದ್ಯುತ್ ಕಂಬ ಸರಿಪಡಿಸುವ ವೆಚ್ಚವನ್ನು ಅವರೇ ಭರಿಸಿದ್ದಾರೆ.
ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕಾಗಮಿಸಿ, ವಿದ್ಯುತ್ ಕಂಬ, ತಂತಿ ದುರಸ್ತಿ ಮಾಡಿ ವಿದ್ಯುತ್ ಸಂಪರ್ಕವನ್ನು ಪುನಃ ಕಲ್ಪಿಸಿದರು.