ಯಲ್ಲಾಪುರ ತಾಲೂಕಿನ ಬೈಲಂದೂರಿನಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದಂಪತಿಯ ಮೇಲೆ ನಾಲ್ಕು ಜನರ ಗುಂಪು ಹಲ್ಲೆ ನಡೆಸಿದೆ.
ಗಾಂಧಿ ಸೋಮಾಪುರಕರ್ ಹಾಗೂ ಗೋಪಿಕಾ ಗಾಂಧಿ ಸೋಮಾಪುರಕರ್ ಹಲ್ಲೆಗೊಳಗಾದ ದಂಪತಿ. ಇವರು ತಮ್ಮ ಜಮೀನಿನಲ್ಲಿರುವ ವೇಳೆ ಏಕಾಏಕಿ ಒಳನುಗ್ಗಿದ ನಾಲ್ಕು ಜನರು ‘ ಇದು ನಿಮ್ಮ ಜಮೀನಲ್ಲ, ಇಲ್ಲಿಂದ ಹೊರಗೆ ಹೋಗಿ’ ಎಂದು ಹೇಳಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಗಾಂಧಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದು, ತಪ್ಪಿಸಲು ಹೋದ ಅವರ ಪತ್ನಿಗೂ ಹೊಡೆದಿದ್ದಾರೆ.
ಹಲ್ಲೆ ನಡೆಸಿದ ಬಮ್ಮು ಲಕ್ಕು ಬಜಾರಿ, ಅಪ್ಪಾರವ ಲಕ್ಕು ಬಜಾರಿ, ನಕಲಿಬಾಯಿ ಬಮ್ಮು ಬಜಾರಿ ಹಾಗೂ ನಕಲಿಬಾಯಿ ಲಕ್ಕು ಬಜಾರಿ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.