ಯಲ್ಲಾಪುರದ ಸುಜ್ಞಾನ ಸೇವಾ ಫೌಂಡೇಷನ್ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆ ಆಯೋಜಿಸಲಾಗಿದೆ.
ಸ್ಪರ್ಧೆಗೆ ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯ, ಆರು ವರ್ಷದ ಒಳಗಿನ ಮಕ್ಕಳ ಶ್ರಿಕೃಷ್ಣ ವೇಷದ ಭಾವಚಿತ್ರಗಳನ್ನು ಆಹ್ವಾನಿಸಲಾಗಿದೆ. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಫೋಟೋಗಳಿಗೆ ನಗದು ಬಹುಮಾನ, ಬೆಳ್ಳಿಯ ಪಾರಿತೋಷಕ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. 23 ಫೋಟೋಗಳಿಗೆ ಸಮಾಧಾನಕರ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಪ್ರದಾನ ಮಾಡಲಾಗುವುದು.
ಈ ಸ್ಪರ್ಧೆಗೆಂದೇ 6 ವರ್ಷದೊಳಗಿನ ಮಗುವಿಗೆ ಕೃಷ್ಣನ ವೇಷ ತೊಡಿಸಿ, ಕ್ಲಿಕ್ಕಿಸಿದ ಪೋಟೋವನ್ನು ಮಾತ್ರ ಕಳುಹಿಸಬೇಕು. ಹಳೆಯ ಪೋಟೋಗಳಿಗೆ ಅವಕಾಶವಿಲ್ಲ, ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು, ಪ್ರವೇಶ ಉಚಿತವಾಗಿದೆ.
ಆಗಸ್ಟ್ 13 ಫೋಟೋ ಕಳುಹಿಸಲು ಕೊನೆಯ ದಿನವಾಗಿದೆ. ಫೋಟೋಗಳನ್ನು 8431662869 ನಂಬರ್ ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 7899588538 ನಂಬರ್ ಗೆ ಸಂಪರ್ಕಿಸಬಹುದೆಂದು ಸುಜ್ಞಾನ ಸೇವಾ ಫೌಂಡೇಷನ್ ಅಧ್ಯಕ್ಷ ಜಿ.ಎನ್.ಭಟ್ ತಟ್ಟಿಗದ್ದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.