6 Skip to content

ಮನೆಯಂಗಳಕ್ಕೆ ಬಂದ ಚಿರತೆ

ಯಲ್ಲಾಪುರ ತಾಲೂಕಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದರೂ, ಚಿರತೆಗಳ‌ ಓಡಾಟಕ್ಕೇನೂ ಅಡ್ಡಿಯಾಗಿಲ್ಲ. ಚಿರತೆಯಿಂದದ ಸಾಕುಪ್ರಾಣಿಗಳನ್ನು ಕಾಯ್ದುಕೊಳ್ಳುವ ಚಿಂತೆ ತಪ್ಪುತ್ತಿಲ್ಲ.‌

ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಅಂಬುಳ್ಳಿಯಲ್ಲಿ ನಾಗೇಶ ಭಟ್ಟ ಅವರ ಮನೆಯಂಗಳದಲ್ಲಿ ಮಂಗಳವಾರ ರಾತ್ರಿ ಚಿರತೆಯೊಂದು ಓಡಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾಗೇಶ ಭಟ್ಟರ ಮನೆಯಂಗಳದಲ್ಲಿ ಕೆಲಕಾಲ ಓಡಾಡಿ ಚಿರತೆ ಅಲ್ಲಿಂದ ಮರಳಿದೆ.
ಮಳೆಯ ಅಬ್ಬರದ ನಡುವೆಯೂ ಚಿರತೆಯ ಓಡಾಟ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳೆದ ವರ್ಷವೂ ಈ ಭಾಗದಲ್ಲಿ ಚಿರತೆ ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ವಿಷಯ ತಿಳಿದು ಬುಧವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಅಂಬುಳ್ಳಿಗೆ ಭೇಟಿ ನೀಡಿದರು. ಚಿರತೆಯ ಓಡಾಟ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಬಗ್ಗೆ ಸ್ಥಳೀಯರು ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಬೋನ್ ಇಟ್ಟು ಚಿರತೆಯನ್ನು ಹಿಡಿಯುವ ಪ್ರಯತ್ನ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.‌ ಯಾವ ರೀತಿಯಲ್ಲಿ ಕಾರ್ಯೋನ್ಮುಖರಾಗುತ್ತಾರೆಂಬುದನ್ನು ಕಾದು ನೋಡಬೇಕಿದೆ.

You cannot copy content of this page