6
  • Latest
ಶ್ರಾವಣ ಯಕ್ಷ ಸಂಭ್ರಮಕ್ಕೆ ದಶಕದ ಸಂಭ್ರಮ

ಶ್ರಾವಣ ಯಕ್ಷ ಸಂಭ್ರಮಕ್ಕೆ ದಶಕದ ಸಂಭ್ರಮ

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Monday, March 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶ್ರಾವಣ ಯಕ್ಷ ಸಂಭ್ರಮಕ್ಕೆ ದಶಕದ ಸಂಭ್ರಮ

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ
advt advt advt
ADVERTISEMENT

ಉತ್ತಮ ಸಂಘಟನೆಯ ಮೂಲಕ ಜಿಲ್ಲೆಯ ಗಮನ ಸೆಳೆದಿರುವ ಯಲ್ಲಾಪುರದ ಶ್ರಾವಣ ಯಕ್ಷ ಸಂಭ್ರಮಕ್ಕೆ ಈ ಬಾರಿ ದಶಮಾನೋತ್ಸವದ ಸಂಭ್ರಮ. ಅಪರೂಪದ ಸಂಯೋಜನೆಯೊಂದಿಗೆ ದಶಮ ಶ್ರಾವಣ ಯಕ್ಷ ಸಂಭ್ರಮ ಕಾರ್ಯಕ್ರಮ ಬರುವ ಆಗಸ್ಟ್ 23 ರಂದು ಕಾರ್ಮಿಕ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕಾಗಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ.

9 ವರ್ಷಗಳ ಹಿಂದೆ ಆರಂಭವಾದ ಈ ಸಂಘಟನೆ, ಜಿಲ್ಲೆಯಲ್ಲೇ ಉತ್ತಮ ಸಂಘಟನೆಗಳಲ್ಲೊಂದಾಗಿ ಬೆಳೆದದ್ದು ಒಂದು ಯಶೋಗಾಥೆ.

ADVERTISEMENT
ADVERTISEMENT

ಸುಬ್ಬಣ್ಣ ಕಂಚಗಲ್ ಅವರ ತಂದೆ ಶಿವರಾಮ ಭಟ್ಟ ಕಂಚಗಲ್ ಯಕ್ಷಗಾನದ ಅಪ್ಪಟ ಅಭಿಮಾನಿ, ಸಂಘಟಕರೂ ಹೌದು. ಮನೆಯಲ್ಲೇ ತಾಳಮದ್ದಲೆ, ಯಕ್ಷಗಾನಗಳ ಸಂಘಟನೆಯನ್ನು ಎರಡು ದಶಕಗಳ ಕಾಲ ಮಾಡಿದವರು. ಮನೆಯಲ್ಲಿ ಕಲೆಯ ಮೇಲಿನ ಅಭಿಮಾನ, ಸಂಘಟನೆಯ ವಾತಾವರಣದ ಪ್ರೇರಣೆಯಿಂದ ಸುಬ್ಬಣ್ಣ ಸಹ ಸಂಘಟನೆಯಲ್ಲಿ ತೊಡಗಿಕೊಂಡರು.

ಶ್ರಾವಣ ಸಂಭ್ರಮ ಶೀರ್ಷಿಕೆಯಡಿ ಮೊದಲ ಕಾರ್ಯಕ್ರಮ ಸಂಘಟಿಸಲು ಮಂಜುನಾಥ ಭಟ್ಟ ಕಂಚಗಲ್, ಕೃಷ್ಣ ಭಟ್ಟ ಕೂಗಲೆ ಕಾರಣರಾದರು. ಅಲ್ಲಿಂದ ಮುಂದೆ ನಾಲ್ಕು ವರ್ಷಗಳ ಕಾಲ ಸುಬ್ಬಣ್ಣ ಏಕಾಂಗಿಯಾಗಿ ಕಾರ್ಯಕ್ರಮ ಸಂಘಟಿಸಿದರು. 2022 ರಿಂದ ರಾಘವೇಂದ್ರ ಬೆಳಸೂರು ಹಾಗೂ ಮಿತ್ರವೃಂದದವರು ಸುಬ್ಬಣ್ಣ ಅವರ ಜೊತೆಯಾಗಿದ್ದಾರೆ.

Advertisement. Scroll to continue reading.

ಪ್ರತಿ ವರ್ಷ ವಿಶೇಷ ಸಂಯೋಜನೆಯನ್ನು ಕಲಾಭಿಮಾನಿಗಳ ಮುಂದಿಡುವುದು ಶ್ರಾವಣ ಸಂಭ್ರಮದ ಹೆಗ್ಗಳಿಕೆ. ಶ್ರಾವಣ ಯಕ್ಷ ಸಂಭ್ರಮದಲ್ಲಿ ಕಳೆದ 9 ವರ್ಷಗಳಲ್ಲಿ 20 ಪೌರಾಣಿಕ ಪ್ರಸಂಗಗಳು ಪ್ರದರ್ಶನಗೊಂಡಿವೆ. ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ, ಬಡಗು ಹಾಗೂ ತೆಂಕು ತಿಟ್ಟುಗಳ 200 ಕ್ಕೂ ಹೆಚ್ಚು ಕಲಾವಿದರು ಪಾತ್ರ ನಿರ್ವಹಿಸಿದ್ದಾರೆ.

Advertisement. Scroll to continue reading.

ಪ್ರತಿ ವರ್ಷದ ಕಾರ್ಯಕ್ರಮದಲ್ಲಿ ಸಂಘಟನೆಯಿಂದ ಸಾಧಕ ಕಲಾವಿದರನ್ನು ಸನ್ಮಾನಿಸುವ ಪರಂಪರೆಯನ್ನೂ ಬೆಳೆಸಿಕೊಂಡು ಬಂದಿದ್ದಾರೆ.‌ ಗೋಪಾಲ ಆಚಾರ್ಯ ತೀರ್ಥಹಳ್ಳಿ, ಕೃಷ್ಣಯಾಜಿ ಬಳ್ಕೂರು, ನೀಲ್ಕೋಡ ಶಂಕರ ಹೆಗಡೆ, ಗಣಪತಿ ಭಾಗ್ವತ ಕವಾಳೆ, ಭಾಸ್ಕರ ಗಾಂವ್ಕರ ಬಿದ್ರೆಮನೆ, ಅಶೋಕ ಭಟ್ಟ ಸಿದ್ದಾಪುರ, ಅನಂತ ಹೆಗಡೆ ದಂತಳಿಗೆ ಹಾಗೂ ಕವಾಳೆ ಸಹೋದರರನ್ನು ಸನ್ಮಾನಿಸಲಾಗಿದೆ.

ವರ್ಷದಿಂದ ವರ್ಷಕ್ಕೆ ಜನಮನ್ನಣೆ ಗಳಿಸುತ್ತಿರುವ ಶ್ರಾವಣ ಯಕ್ಷ ಸಂಭ್ರಮದ ದಶಮಾನೋತ್ಸವವನ್ನು ವಿಶೇಷವಾಗಿ ಆಚರಿಸಲು ಸಂಘಟನೆ ಸಿದ್ಧವಾಗಿದೆ. ಆಗಸ್ಟ್ 23 ರ ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ನಿರಂತರವಾಗಿ 12 ತಾಸುಗಳ ಕಾಲ ಯಕ್ಷಗಾನ ಪ್ರದರ್ಶನ ನಡೆಯಲಿದೆ. ದಶಮಾನೋತ್ಸವದ ಪ್ರಯುಕ್ತ ವಿಶೇಷ ಸಂಯೋಜನೆ ಮಾಡಲಾಗಿದ್ದು, ರತ್ನಾವತಿ ಕಲ್ಯಾಣ, ಊರ್ವಶಿ ಶಾಪ, ಮಾರುತಿ ಪ್ರತಾಪ, ಮಾರಣಾಧ್ವರ ಯಕ್ಷಗಾನ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.

ದಕ್ಷಿಣೋತ್ತರಕನ್ನಡ ಜಿಲ್ಲೆಯ 40 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. ತೆಂಕು-ಬಡಗು ಕಲಾವಿದರ ಕೂಡುವಿಕೆಯ ಒಂದು ಪ್ರಸಂಗ ಇರುವುದು ವಿಶೇಷ. ತೆಂಕು-ಬಡಗುಗಳೆರಡರಲ್ಲೂ ಭಾಗವತಿಕೆಯಲ್ಲಿ ಪರಿಣಿತರಾಗಿರುವ ದಿನೇಶ ಭಟ್ಟ ಯಲ್ಲಾಪುರ ಅವರನ್ನು ಈ ಬಾರಿ ಸನ್ಮಾನಿಸಲಾಗುವುದು. ದಶಮಾನೋತ್ಸವದ ಅಂಗವಾಗಿ ಯಕ್ಷಗಾನದ ವಿವಿಧ ವಿಭಾಗಗಳ 10 ಜನರಿಗೆ ಗೌರವ ಸಮರ್ಪಣೆ ನಡೆಯಲಿದೆ.

ShareSendTweetShare
ADVERTISEMENT
Previous Post

ಮಗಳ ಖಾಸಗಿ ಪೊಟೊ-ವಿಡಿಯೊ ಬಹಿರಂಗಗೊಳಿಸುವ ಬೆದರಿಕೆ: ಬ್ಲ್ಯಾಕ್ ಮೇಲರ್ ವಿರುದ್ಧ ದೂರು ನೀಡಿದ ತಂದೆ

Next Post

ಕಳಚೆಯಲ್ಲಿ ಕುಸಿದು ಬಿತ್ತು ಮನೆಯ ಗೋಡೆ

Next Post
ಕಳಚೆಯಲ್ಲಿ ಕುಸಿದು ಬಿತ್ತು ಮನೆಯ ಗೋಡೆ

ಕಳಚೆಯಲ್ಲಿ ಕುಸಿದು ಬಿತ್ತು ಮನೆಯ ಗೋಡೆ

ಮದುವೆಯೂ ಇಲ್ಲ, ಹಣವೂ ಇಲ್ಲ: ಉತ್ತರದ ಹೆಣ್ಣಿನಾಸೆ ತೋರಿ ಹಳ್ಳಕ್ಕೆ ಕೆಡವಿದರು

ಮದುವೆಯೂ ಇಲ್ಲ, ಹಣವೂ ಇಲ್ಲ: ಉತ್ತರದ ಹೆಣ್ಣಿನಾಸೆ ತೋರಿ ಹಳ್ಳಕ್ಕೆ ಕೆಡವಿದರು

ಶ್ರೀಗಳ ಸದಾಶಯಕ್ಕೆ ಭಂಡರಿಂದ ಭಂಗ: ಮದುವೆಯ ಕನಸು ಬಿತ್ತಿ, ಕಾಸು ಪೀಕುವ ಖದೀಮರು

ಶ್ರೀಗಳ ಸದಾಶಯಕ್ಕೆ ಭಂಡರಿಂದ ಭಂಗ: ಮದುವೆಯ ಕನಸು ಬಿತ್ತಿ, ಕಾಸು ಪೀಕುವ ಖದೀಮರು

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.