ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಡೆಂಗಿ ಜ್ವರ ಪ್ರಕರಣಗಳು ಏರಿಕೆಯಾಗಿದ್ದು, ಪ್ರಸಕ್ತ ಮಳೆಗಾಲ ಹಾಗೂ ನಂತರದ ದಿನಗಳಲ್ಲಿ ರೋಗ ಪ್ರಸರಣವು ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಪ್ರತಿ ಶುಕ್ರವಾರ `ಈಡಿಸ್ ಸೊಳ್ಳೆ ನಿರ್ಮೂಲನಾ ದಿನ’ವನ್ನಾಗಿ ಆಚರಿಸಲು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಈ ಹಿನ್ನಲೆ ಪ್ರತಿ ಶುಕ್ರವಾರ ಸಾರ್ವಜನಿಕರು ಸ್ವತಃ ತಮ್ಮ ಮನೆ, ಕಚೇರಿ, ಶಾಲಾ – ಕಾಲೇಜುಗಳಲ್ಲಿ ನೀರು ತುಂಬಿಡುವ ಬ್ಯಾರಲ್, ತೊಟ್ಟಿಗಳನ್ನು ಸ್ವಚ್ಛ ಮಾಡಬೇಕು. ಆ ಮೂಲಕ ದೈನಂದಿನ ಅಭ್ಯಾಸ ಪದ್ಧತಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ರೋಗದಿಂದ ದೂರ ಇರಬೇಕು ಎಂಬುದು ಆರೋಗ್ಯಾಧಿಕಾರಿಗಳು ಮನವಿ ಮಾಡಿದ್ದಾರೆ. ಪ್ರತಿ ಗುರುವಾರ ಲಸಿಕಾ ದಿನ ಆಗಿರುವಂತೆ ಪ್ರತಿ ಶುಕ್ರವಾರ `ಈಡಿಸ್ ಸೊಳ್ಳೆ ನಿರ್ಮೂಲನಾ ದಿನ’ ಆಚರಿಸೋಣ ಎಂದು ಜಿಲ್ಲಾಡಳಿತ ಕರೆ ನೀಡಿದೆ. ಆ ಮೂಲಕ ಸ್ವಚ್ಛತೆಗೆ ಮೊದಲ ಆದ್ಯತೆ ಕೊಡಿ ಎಂಬುದು ಅಧಿಕಾರಿಗಳ ಕಾಳಜಿ.
Discussion about this post