ಹುಬ್ಬಳ್ಳಿ – ಅಂಕೋಲಾ ಹೆದ್ದಾರಿ ಪಕ್ಕ ದೊಡ್ಡ ದೊಡ್ಡ ಮರಗಳು ಬೆಳೆದಿದ್ದು, ಅವುಗಳ ರೆಂಬೆ-ಕೊoಬೆಗಳು ಮುರಿಯುವ ಹಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅಪಾಯ ಒಡ್ಡಬಹುದಾದ ಸನ್ನಿವೇಶ ಎದುರಾದರೂ ಇದನ್ನು ಗಮನಿಸಿದವರಿಲ್ಲ.
ಪ್ರಸ್ತುತ ಮಳೆ ಜೋರಾಗಿದ್ದು, ಎಲ್ಲಡೆ ಗುಡ್ಡ ಕುಸಿತ – ಮರಗಳ ಮುರಿತ ಸಾಮಾನ್ಯವಾಗಿದೆ. ಈ ಹೆದ್ದಾರಿಯಲ್ಲಿ ಸಹ ಈ ಹಿಂದೆ ಸಾಕಷ್ಟು ಅನಾಹುತಗಳು ನಡೆದಿದ್ದು, ಪ್ರಸ್ತುತ ದೊಡ್ಡ ಗಾತ್ರದ ಲಾರಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದೆ. ಅವುಗಳ ಮೇಲ್ಬಾಗ ಕೊಂಬೆಗಳಿಗೆ ತಾಗಿ ಮುರಿದು ಬಿದ್ದಲ್ಲಿ ಇತರೆ ವಾಹನಗಳಿಗೆ ಅಪಾಯ ಖಚಿತ. ಹೆದ್ದಾರಿ ಅಂಚಿನ ಮರಗಳನ್ನು ಕತ್ತರಿಸುವುದು ಹೆದ್ದಾರಿ ಪ್ರಾಧಿಕಾರಕ್ಕೆ ಸಂಬoಧಿಸಿದ ವಿಷಯ ಎಂಬುದು ಅರಣ್ಯ ಇಲಾಖೆಯ ಅಂಬೋಣ. ಪಟ್ಟಣ ವ್ಯಾಪ್ತಿಯಲ್ಲಿ ಸ್ಥಳೀಯ ಆಡಳಿತದವರು ಇದರ ನಿರ್ವಹಣೆ ಮಾಡುತ್ತಾರೆ ಎಂಬುದು ಹೆದ್ದಾರಿ ಪ್ರಾಧಿಕಾರದವರ ಮಾತು. ರೆಂಬೆ ಕೊಂಬೆಗಳನ್ನು ತುಂಡರಿಸಲು ಪರವಾನಿಗೆ ಅಗತ್ಯ ಎಂಬುದು ಸ್ಥಳೀಯ ಆಡಳಿತದ ಅಭಿಪ್ರಾಯ. ಒಟ್ಟಿನಲ್ಲಿ ಇಲಾಖೆಗಳ ಸಮನ್ವಯ ಕೊರತೆಯಿಂದ ಸಾರ್ವಜನಿಕರಿಗೆ ಅಪಾಯವಾಗುತ್ತಿದ್ದು, ಅಪಾಯಕಾರಿಯಲ್ಲಿರುವ ರೆಂಬೆ-ಕೊoಬೆಗಳ ಬಗ್ಗೆ ಅರಿತು ಪ್ರಯಾಣಿಕರೇ ಹುಷಾರಾಗಿ ಚಲಿಸುವುದು ಒಳಿತು.
Discussion about this post