ಗಜನಿ ಭೂಮಿಯಲ್ಲಿ ಸಿಗಡಿ ಕೃಷಿ ನಡೆಸುತ್ತಿದ್ದ ಗುಜರಾತ್ ಕಂಪನಿ ಕಾರ್ಮಿಕರಿಗೆ ಸಂಬಳ ಕೊಟ್ಟಿಲ್ಲ.
ಕುಮಟಾದ ಬರ್ಗಿ ಕಿಮಾನಿಯಲ್ಲಿ `ಶ್ರೀಂಮ್ಸ್’ ಎಂಬ ಕಂಪನಿ ಕಳೆದ ಏಳು ವರ್ಷಗಳಿಂದ ರೈತರ ಭೂಮಿಯನ್ನು ಬಾಡಿಗೆ ಪಡೆದು ಸಿಗಡಿ ಕೃಷಿ ನಡೆಸುತ್ತಿತ್ತು. ಈ ಕೆಲಸಕ್ಕಾಗಿ ಸ್ಥಳೀಯರನ್ನು ಕಂಪನಿ ನೇಮಿಸಿಕೊಂಡಿತ್ತು. ಆದರೆ, ಸಮಯಕ್ಕೆ ಸರಿಯಾಗಿ ಸಂಬಳ ಕೊಡುತ್ತಿರಲಿಲ್ಲ. ಇದೀಗ ಆ ಕಂಪನಿಯೇ ಅಲ್ಲಿಂದ ನಾಪತ್ತೆಯಾಗಿದ್ದು, ತಮಗೆ ಬರಬೇಕಿದ್ದ ಸಂಬಳಕ್ಕಾಗಿ ದುಡಿದ ಕಾರ್ಮಿಕರು ಅಲೆದಾಡುತ್ತಿದ್ದಾರೆ.
ಪ್ರಸ್ತುತ ಶ್ರೀಂಮ್ಸ್ ಕಂಪನಿ ಬದಲಾಗಿ ಬೇರೆ ಕಂಪನಿ ಅಲ್ಲಿಗೆ ಆಗಮಿಸಿದೆ. ಆ ಕಂಪನಿಯ ಮುಂದೆ ಕಾರ್ಮಿಕರು ಜಮಾಯಿಸಿ ತಮಗಾದ ಅನ್ಯಾಯದ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಈಗಿನ ಕಂಪನಿಯವರು `ಶ್ರೀಂಮ್ಸ್’ ಕಂಪನಿ ಮುಖ್ಯಸ್ಥರಿಗೆ ಫೋನ್ ಮಾಡಿ ಕಾರ್ಮಿಕರ ಸಂಬಳದ ಬಗ್ಗೆ ವಿಚಾರಿಸಿದ್ದಾರೆ. ಆಗ, ಗುಜರಾತದ `ಶ್ರೀಂಮ್ಸ್’ ಕಂಪನಿಯ ಮಾಲಕ `ಮತ್ತೆ ಸಂಬಳಕ್ಕಾಗಿ ಫೋನ್ ಮಾಡಿದರೆ ನಿಮ್ಮ ಜೀವ ತೆಗೆಯುವೆ’ ಎಂದು ಬೆದರಿಕೆ ಒಡ್ಡಿದ್ದಾನೆ. `ಶ್ರೀಂಮ್ಸ್’ ಕಂಪನಿ ಕಾರ್ಮಿಕರ ಜೊತೆ ಅಲ್ಲಿನ ಗೂಡಂಗಡಿಕಾರರಿಗೆ, ಇತರೆ ವಾಹನ ಮಾಲಕರಿಗೆ ಸಹ ವಂಚಿಸಿದ ಆರೋಪವಿದೆ.
Discussion about this post