6 Skip to content

ಭಟ್ಕಳದಲ್ಲಿ ಬೇಕಾಬಿಟ್ಟಿ ಬೈಕ್ ನಿಲುಗಡೆ: ವಸೂಲಿಗೂ ಇಲ್ಲ ನಿರ್ಧಿಷ್ಟ ನಿಯಮ

ಭಟ್ಕಳ ಬಸ್ ನಿಲ್ದಾಣದಲ್ಲಿ ಬೇಕಾಬಿಟ್ಟಿಯಾಗಿ ಬೈಕ್ ನಿಲ್ಲಿಸಲಾಗುತ್ತದೆ. ಹೀಗೆ ಬೈಕ್ ನಿಲ್ಲಿಸುವವರಿಂದ ಬೇಕಾಬಿಟ್ಟಿಯಾಗಿ ಹಣವನ್ನು ವಸೂಲಿ ಮಾಡಲಾಗುತ್ತದೆ. ಕೆ ಎಸ್ ಆರ್ ಟಿ ಸಿ ಹೆಸರಿನಲ್ಲಿ ಹಣ ವಸೂಲಿ ನಡೆಯುತ್ತಿದ್ದರೂ ಈ ಬಗ್ಗೆ ಅಲ್ಲಿನ ಅಧಿಕಾರಿಗಳಿಗೆ ಮಾಹಿತಿ ಇಲ್ಲ!
ವಾಹನ ನಿಲುಗಡೆಗೆ ಸಂಬoಧಿಸಿ ಇಲ್ಲಿ ಯಾವುದೇ ನಾಮಫಲಕ ಇಲ್ಲ. ಇಂಥಹುದೇ ಜಾಗದಲ್ಲಿ ವಾಹನ ನಿಲ್ಲಿಸಬೇಕು ಎಂಬ ಸೂಚನೆ ಇಲ್ಲ. ಟೆಂಡರ್ ಪಡೆದವರ ಬಗ್ಗೆಯೂ ಗೊತ್ತಿಲ್ಲ. ಇಂಥ ವಾಹನಕ್ಕೆ ಇಷ್ಟು ಶುಲ್ಕ ಎಂಬ ನಿಯಮ ಮಾಡಿದವರು ಇಲ್ಲ. ಅಧಿಕಾರಿಗಳಿಗೆ ಸಹ ಇಲ್ಲಿ ಹಣ ವಸೂಲಿ ನಡೆಯುತ್ತಿದೆ ಎಂಬ ವಿಷಯ ಗೊತ್ತಿಲ್ಲ. ಹೀಗಾಗಿ ಕೆ ಎಸ್ ಆರ್ ಟಿ ಸಿ ಹೆಸರಿನಲ್ಲಿ ನಕಲಿ ರಸೀದಿ ನೀಡುತ್ತಿರುವ ಅನುಮಾನ ದಟ್ಟವಾಗಿದೆ.
ಎಲ್ಲಾ ಕಡೆ ವಾಹನ ನಿಲುಗಡೆ ಶುಲ್ಕ ಪಡೆಯುವಾಗ ಜನರಿಗೆ ಸರಿಯಾದ ಮಾಹಿತಿ ನೀಡಲಾಗುತ್ತದೆ. ಶುಲ್ಕದ ರಸೀದಿಯಲ್ಲಿ ನೀಡುವ ಸೇವೆಗಳ ಬಗ್ಗೆಯೂ ಮಾಹಿತಿ ಇರುತ್ತದೆ. ವಾಹನ ನಿಲುಗಡೆಯ ಸಮಯ, ಎಷ್ಟು ಸಮಯದವರೆಗೆ ಇಲ್ಲಿ ವಾಹನ ನಿಲುಗಡೆಗೆ ಅವಕಾಶ ಇದೆ ಎಂದು ಸಹ ತಿಳಿಸಲಾಗುತ್ತದೆ. ಆದರೆ, ಇಲ್ಲಿ ಮಾತ್ರ ಅದ್ಯಾವುದು ಇಲ್ಲ.

Leave a comment

Leave a Reply

You cannot copy content of this page