ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಸಹಯೋಗದಲ್ಲಿ ಕೆನರಾ ಬ್ಯಾಂಕಿನವರು `ಕೋಳಿ ಸಾಕುವ ತರಬೇತಿ’ ನೀಡಲು ಸಿದ್ಧತೆ ನಡೆಸಿದ್ದಾರೆ. ಅವರು ವಿಧಿಸಿದ ನಿಯಮಗಳಲ್ಲಿ `ಕನ್ನಡ ಕಡ್ಡಾಯ’ ಎಂದಿದೆ. ಅಂದರೆ ಕನ್ನಡ ಓದಲು ಮತ್ತು ಬರೆಯಲು ಬರುವವರಿಗೆ ಮಾತ್ರ ಇಲ್ಲಿ ತರಬೇತಿ ನೀಡಲಾಗುತ್ತದೆ.
10 ದಿನಗಳ ಶಿಬಿರ ಇದಾಗಿದ್ದು, ಆಸಕ್ತರಿಗೆ ಊಟ-ವಸತಿ ಎರಡೂ ಉಚಿತ. ಗ್ರಾಮೀಣ ಭಾಗದವರಿಗೆ ಹೆಚ್ಚಿನ ಅವಕಾಶ ನೀಡಲು ನಿರ್ಧರಿಸಲಾಗಿದೆ. 18-45 ವರ್ಷದ ಒಳಗಿನವರು ಶಿಬಿರದಲ್ಲಿ ಭಾಗವಹಿಸಬಹುದು. ಆಧಾರ್ ಕಾರ್ಡ ಹೊಂದಿರಬೇಕು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಹಾಗೂ ರುಡ್‌ಸೆಟ್ ಸಂಸ್ಥೆ ಸಹ ಈ ತರಬೇತಿಯ ಸಹಯೋಗ ಹೊಂದಿದೆ. ಜುಲೈ 2 ಅರ್ಜಿ ಸಲ್ಲಿಕೆಗೆ ಕೊನೆ ದಿನ. ಮಾಹಿತಿಗೆ 9380162042, 9740982585 ಸಂಪರ್ಕಿಸಬಹುದು.
Discussion about this post